alex Certify ಏಕಕಾಲಕ್ಕೆ ಪ್ರತಿಸ್ಪರ್ಧಿ ಕಂಪನಿಗಳೊಂದಿಗೆ ಕೆಲಸ ಮಾಡುತ್ತಿದ್ದ 300 ಸಿಬ್ಬಂದಿಗೆ ವಿಪ್ರೋ ಬಿಗ್ ಶಾಕ್: ಕೆಲಸದಿಂದಲೇ ವಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲಕ್ಕೆ ಪ್ರತಿಸ್ಪರ್ಧಿ ಕಂಪನಿಗಳೊಂದಿಗೆ ಕೆಲಸ ಮಾಡುತ್ತಿದ್ದ 300 ಸಿಬ್ಬಂದಿಗೆ ವಿಪ್ರೋ ಬಿಗ್ ಶಾಕ್: ಕೆಲಸದಿಂದಲೇ ವಜಾ

ವಿಪ್ರೋ ಕಂಪನಿಯೊಂದಿಗೆ ಕೆಲಸ ಮಾಡಿದ 300 ಜನರು ಅದೇ ಸಮಯದಲ್ಲಿ ಕಂಪನಿಯ ಪ್ರತಿಸ್ಪರ್ಧಿಗಳೊಂದಿಗೆ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಅಂತಹ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ ಎಂದು ಅಧ್ಯಕ್ಷ ರಿಷಾದ್ ಪ್ರೇಮ್‌ ಜಿ ಅವರು ತಿಳಿಸಿದ್ದಾರೆ.

ಎಐಎಂಎ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿಷಾದ್ ಪ್ರೇಮ್‌ ಜಿ, ಮೂನ್‌ ಲೈಟಿಂಗ್‌ ನ(ಟೆಕ್ಕಿಗಳು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸ ಮಾಡಲು ಸೈಡ್ ಗಿಗ್‌ ಗಳನ್ನು ತೆಗೆದುಕೊಳ್ಳುವ ಅಭ್ಯಾಸ) ವಿಮರ್ಶಕರಾಗಿದ್ದಾರೆ. ವಿಪ್ರೋ ಜೊತೆ ಕೆಲಸ ಮಾಡುವಾಗ ಏಕಕಾಲದಲ್ಲಿ ನೇರವಾಗಿ ಪ್ರತಿಸ್ಪರ್ಧಿಗಳಿಗೆ ಕೆಲಸ ಮಾಡಲು ನಿರ್ಧರಿಸಿದಂತಹ ಉದ್ಯೋಗಿಗಳಿಗೆ ಕಂಪನಿಯಲ್ಲಿ ಸ್ಥಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾಸ್ತವವೆಂದರೆ ಇಂದು ವಿಪ್ರೋಗಾಗಿ ಕೆಲಸ ಮಾಡುವವರು ನಮ್ಮ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಿಗಾಗಿ ನೇರವಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ನಿಖರವಾಗಿ 300 ಜನರನ್ನು ನಾವು ಕಂಡುಹಿಡಿದಿದ್ದೇವೆ. ಇದು ಮೋಸ. ಕಂಪನಿ ನಿಯಮದ ಉಲ್ಲಂಘನೆಯಾಗಿದೆ ಎಂದರು.

ಪ್ರೇಮ್‌ ಜಿ ಟ್ವೀಟ್‌ ನಲ್ಲಿ, ಟೆಕ್ ಉದ್ಯಮದಲ್ಲಿ ಜನರು ಮೂನ್‌ ಲೈಟ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಇದು ಮೋಸ ಎಂದು ಹೇಳಿದ್ದು, ಅವರ ಟ್ವೀಟ್ ಉದ್ಯಮದೊಳಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಐಟಿ ಕಂಪನಿಗಳು ಇಂತಹ ಅಭ್ಯಾಸಗಳ ಬಗ್ಗೆ ಎಚ್ಚರಿಕೆ ನೀಡಿವೆ.

ಕಳೆದ ವಾರ ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾದ Infosys, ತನ್ನ ಉದ್ಯೋಗಿಗಳಿಗೆ ದ್ವಂದ್ವ ಉದ್ಯೋಗ ಅಥವಾ ‘ಮೂನ್‌ಲೈಟಿಂಗ್’ ಅನ್ನು ಅನುಮತಿಸುವುದಿಲ್ಲ ಎಂದು ಒತ್ತಿಹೇಳಿದೆ. ಒಪ್ಪಂದದ ಷರತ್ತುಗಳ ಯಾವುದೇ ಉಲ್ಲಂಘನೆಯು ಉದ್ಯೋಗ ಕಳೆದುಕೊಳ್ಳಲು ಕಾರಣವಾಗಬಹುದು ಎಂದು ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ.

ನೋ ಡಬಲ್ ಲೈಫ್ ಎಂಬ ಶೀರ್ಷಿಕೆಯ ಇನ್ಫೋಸಿಸ್‌ ನ ಆಂತರಿಕ ಸಂವಹನ ಉದ್ಯೋಗಿಗಳ ಕೈಪಿಡಿ ಮತ್ತು ನೀತಿ ಸಂಹಿತೆಯ ಪ್ರಕಾರ ದ್ವಿ ಉದ್ಯೋಗವನ್ನು ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

IBM ಇಂಡಿಯಾ ಕೂಡ ಮೂನ್‌ ಲೈಟಿಂಗ್‌ ಅನೈತಿಕ ಅಭ್ಯಾಸ ಎಂದು ಹೇಳಿದೆ. IBM ನ ಭಾರತ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್ ಅವರು, ಸೇರುವ ಸಮಯದಲ್ಲಿ ಕಂಪನಿಯ ಉದ್ಯೋಗಿಗಳು IBM ಗೆ ಮಾತ್ರ ಕೆಲಸ ಮಾಡುವುದಾಗಿ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ತಮ್ಮ ಉಳಿದ ಸಮಯದಲ್ಲಿ ಏನು ಮಾಡಬಹುದಾದರೂ ಮೂನ್ ಲೈಟಿಂಗ್ ನೈತಿಕವಾಗಿ ಸರಿಯಲ್ಲ ಎಂದು ಃಏಳಿದ್ದಾರೆ.

ಟೆಕ್ ಮಹೀಂದ್ರಾ ಸಿಇಒ ಸಿಪಿ ಗುರ್ನಾನಿ ಇತ್ತೀಚೆಗೆ ಟ್ವೀಟ್ ಮಾಡಿದ್ದು, ಕಾಲಕ್ಕೆ ತಕ್ಕಂತೆ ಬದಲಾಗುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...