ಆನ್ಲೈನ್ ಫ್ಯಾಶನ್ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಇ ಕಾಮರ್ಸ್ ದೈತ್ಯ ಮಿಂತ್ರಾ ಇದೀಗ ತನ್ನ ಲೋಗೋವನ್ನ ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದಿದೆ. ಮುಂಬೈನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಮಿಂತ್ರಾ ಲೋಗೋದಲ್ಲಿನ ದೋಷದ ಬಗ್ಗೆ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರನ್ನ ನೀಡಿದ್ದರು. ಈ ಸಂಬಂಧ ಮಿಂತ್ರಾ ಲೋಗೋ ಬದಲಾವಣೆ ನಿರ್ಧಾರ ಕೈಗೊಂಡಿದೆ.
ಅವೇಸ್ತಾ ಫೌಂಡೇಶನ್ ಎಂಬ ಎನ್ಜಿಓದ ಸ್ಥಾಪಕಿ ನಾಜ್ ಪಟೇಲ್ ಕಳೆದ ವರ್ಷ ಡಿಸೆಂಬರ್ನಲ್ಲಿ ಮಿಂತ್ರಾ ವಿರುದ್ಧ ದೂರನ್ನ ದಾಖಲಿಸಿದ್ದರು. ಮಿಂತ್ರಾ ಕಂಪನಿಯ ಲೋಗೋ ಬೆತ್ತಲೆ ಮಹಿಳೆಗೆ ಹೋಲಿಕೆ ಮಾಡಿದಂತಿದೆ. ಇದರಿಂದ ಮಹಿಳೆಯರ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದ್ದರು.
PNB ಗ್ರಾಹಕರಿಗೆ ಸಿಹಿ ಸುದ್ದಿ: ಬ್ಯಾಂಕ್ ನೀಡ್ತಿದೆ ಪ್ರತಿ ತಿಂಗಳು 30 ಸಾವಿರ ಗಳಿಸುವ ಅವಕಾಶ
ಈ ಸಂಬಂಧ ಮುಂಬೈ ಸೈಬರ್ ಕ್ರೈಂ ವಿಭಾಗ ಮಿಂತ್ರಾಗೆ ಮೇಲ್ ಕಳಿಸಿತ್ತು. ಹಾಗೂ ದೂರಿನ ಬಗ್ಗೆ ಉಲ್ಲೇಖ ಮಾಡಿತ್ತು. ಸೈಬರ್ ಕ್ರೈಂ ಇಲಾಖೆಯ ಇ ಮೇಲ್ಗೆ ಸ್ಪಂದಿಸಿದ ಮಿಂತ್ರಾ ತಮ್ಮ ಇಮೇಲ್ ಬದಲಾವಣೆ ಮಾಡೋದಾಗಿ ಹೇಳಿದೆ.
ಹೀಗಾಗಿ ಮಿಂತ್ರಾ ಹೊಸ ಲೋಗೋದ ಹುಡುಕಾಟದಲ್ಲಿದೆ. ತನ್ನ ಅಪ್ಲಿಕೇಶನ್, ವೆಬ್ಸೈಟ್ ಹಾಗೂ ಡೆಲಿವರಿ ಪ್ಯಾಕೆಜಿಂಗ್ಗಳಲ್ಲಿ ಶೀಘ್ರದಲ್ಲೇ ಮಿಂತ್ರಾ ಲೋಗೋ ಬದಲಾಗಲಿದೆ.