ದೇಶದಲ್ಲಿ ಮಹಿಳೆಯರ ಮದುವೆಯ ವಯಸ್ಸಿನ ಮಿತಿಯನ್ನ ಏರಿಕೆ ಮಾಡುವುದರಿಂದ ಭಾರತಕ್ಕೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಲಾಭವಾಗಲಿದೆ ಅಂತಾ ಸ್ಟೇಟ್ ಬ್ಯಾಂಕ್ ಇಂಡಿಯಾ ಹೇಳಿದೆ.
ಮಹಿಳೆಯರ ಮದುವೆ ವಯಸ್ಸನ್ನ ಏರಿಕೆ ಮಾಡೋದ್ರಿಂದ ಮಹಿಳೆಯರಿಗೆ ಸಾಮಾಜಿಕ ಹಾಗೂ ಆರ್ಥಿಕ ರಂಗದಲ್ಲಿ ಬೆಳೆಯೋದಕ್ಕೆ ಸಮಯಾವಕಾಶ ಸಿಕ್ಕಂತೆ ಆಗುತ್ತೆ ಅಂತಾ ಅರ್ಥಶಾಸ್ತ್ರಜ್ಞೆ ಸೌಮ್ಯ ಕಾಂತಿ ಘೋಷ್ ಹೇಳಿದ್ದಾರೆ .
ಕೇವಲ ಆರ್ಥಿಕ ಸುದಾರಣೆ ಮಾತ್ರವಲ್ಲದೇ ತಾಯಂದಿರ ಮರಣ, ಪೌಷ್ಠಿಕಾಂಶದ ಕೊರತೆ ಸೇರಿದಂತೆ ಇನ್ನಷ್ಟು ಸಾಮಾಜಿಕ ಪಿಡುಗುಗಳನ್ನ ನಾಶ ಮಾಡಬಹುದಾಗಿದೆ. ಹುಡುಗಿಯರಿಗೆ ಹೆಚ್ಚಿನ ಶಿಕ್ಷಣ ಕೊಡಿಸಿದ್ದಲ್ಲಿ ಮಹಿಳೆ ಕೂಡ ಆರ್ಥಿಕವಾಗಿ ಸ್ವತಂತ್ರಳಾಗುತ್ತಾಳೆ ಅಂತಾ ವರದಿ ಹೇಳಿದೆ.
ದೇಶದಲ್ಲಿ ಸದ್ಯ ನಿಗದಿಯಾಗಿರುವ ಮಹಿಳೆಯರ ಮದುವೆ ವಯಸ್ಸಿನ ಮಿತಿಯನ್ನ 21 ವರ್ಷಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಸಮಿತಿಯನ್ನೂ ರಚನೆ ಮಾಡಿದೆ.