alex Certify ವಾಟ್ಸಾಪ್ ಪೇ ಮೂಲಕ ಹಣ ರವಾನೆ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಪೇ ಮೂಲಕ ಹಣ ರವಾನೆ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

WhatsApp Pay now live with SBI, HDFC Bank, ICICI Bank, Axis Bank: Here's how to do payment on Android, iOS | Personal Finance News | Zee News

ಮಲ್ಟಿ ಮೀಡಿಯಾ ಸಂದೇಶ ಸೇವಾದಾರ ವಾಟ್ಸಾಪ್‌ ಇನ್ನು ಮುಂದೆ ತನ್ನ ಗ್ರಾಹಕರಿಗೆ ಡಿಜಿಟಲ್ ಹಣ ವರ್ಗವಣೆ ಮಾಡಲೆಂದು ನೂತನ ಸೌಲಭ್ಯ ಹೊರತಂದಿದೆ. ವಾಟ್ಸಾಪ್‌ ಪೇ ಕಿರು ತಂತ್ರಾಂಶ ಚಾಲ್ತಿಗೆ ಬಂದಿದ್ದು ಇನ್ನು ಮುಂದೆ ಎಸ್‌ಬಿಐ, ಐಸಿಐಸಿಐ, ಆಕ್ಸಿಸ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕುಗಳ ಗ್ರಾಹಕರು ಬಳಸಬಹುದಾಗಿದೆ.

ಎರಡು ಕೋಟಿ ಬಳಕೆದಾರರ ಗರಿಷ್ಠ ಮಿತಿಯೊಂದಿಗೆ ಆರಂಭಿಸಿ, ಬರುವ ದಿನಗಳಲ್ಲಿ ಹಂತಹಂತವಾಗಿ ತನ್ನ ಯುಪಿಐ ನೆಲೆಯನ್ನು ಇನ್ನಷ್ಟು ವರ್ಧಿಸಿಕೊಳ್ಳುವ ಅವಕಾಶ ವಾಟ್ಸಾಪ್ ಪೇಗೆ ಇದ್ದು, ಈ ಮೂಲಕ ದೇಶದ ಆರ್ಥಿಕ ಪ್ರಗತಿ ಹಾಗೂ ಆರ್ಥಿಕ ಒಳಗೊಳ್ಳುವಿಕೆಯ ಪ್ರಕ್ರಿಯೆಗೆ ನೆರವಾಗಬಹುದಾಗಿದೆ ಎಂದು ವಾಟ್ಸಾಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್‌ ಬೋಸ್ ತಿಳಿಸಿದ್ದಾರೆ.

“ಸಂದೇಶ ಕಳುಹಿಸಿದಷ್ಟೇ ಸರಳವಾಗಿ ಹಾಗೂ ಸುಭದ್ರವಾಗಿ ವಾಟ್ಸಾಪ್‌ ಮುಖಾಂತರ ಹಣವನ್ನು ಕಳುಹಿಸಬಹುದಾಗಿದೆ. ಮುಖತಃ ಭೇಟಿ ಮಾಡದೇ ಅಥವಾ ಬ್ಯಾಂಕಿಗೆ ಹೋಗದೆಯೂ ಸಹ ಕುಟುಂಬದ ಸದಸ್ಯರಿಗೆ ಹಣ ಕಳುಹಿಸುವುದು ಅಥವಾ ಸರಕುಗಳ ವೆಚ್ಚ ಭರಿಸುವುದು ಇನ್ನು ಮುಂದೆ ಸರಳವಾಗಲಿದೆ,” ಎಂದು ವಾಟ್ಸಾಪ್ ಮ್ಯಾನೇಜ್‌ಮೆಂಟ್ ತಿಳಿಸಿದೆ.

ಒಟಿಪಿ ಮುಖಾಂತರ ಸುರಕ್ಷಿತವಾದ ಪ್ರಕ್ರಿಯೆ ಮೂಲಕ ವಾಟ್ಸಾಪ್‌ಗೆ ನಿಮ್ಮ ಬ್ಯಾಂಕ್ ಖಾತೆ ಲಿಂಕಿಂಗ್ ಮಾಡಿದ ಕೂಡಲೇ ಬಹಳ ಸರಳವಾದ ಹೆಜ್ಜೆಗಳಲ್ಲಿ ನಿಮ್ಮ ಮೊಬೈಲ್‌ನಲ್ಲಿರುವ ಕಾಂಟಾಕ್ಟ್‌ಗಳಿಗೆ ಸರಳವಾಗಿ ಹಣ ರವಾನೆ ಮಾಡಬಹುದಾಗಿದೆ. ಆಂಡ್ರಾಯ್ಡ್ ಹಾಗೂ ಐಒಎಸ್‌ ಬಳಕೆದಾರರು ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...