alex Certify ಕೋಟ್ಯಾಂತರ ಬಳಕೆದಾರರ ವಲಸೆಗೆ ಬೆಚ್ಚಿಬಿದ್ದ ವಾಟ್ಸಾಪ್, ಮಾಹಿತಿ ಹಂಚಿಕೆ ಗಡುವು ಮುಂದೂಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟ್ಯಾಂತರ ಬಳಕೆದಾರರ ವಲಸೆಗೆ ಬೆಚ್ಚಿಬಿದ್ದ ವಾಟ್ಸಾಪ್, ಮಾಹಿತಿ ಹಂಚಿಕೆ ಗಡುವು ಮುಂದೂಡಿಕೆ

ಜನಪ್ರಿಯ ಜಾಲತಾಣ ವಾಟ್ಸಾಪ್, ಫೇಸ್ಬುಕ್ ನೊಂದಿಗೆ ಡೇಟಾ ಹಂಚಿಕೊಳ್ಳಲು ಸಂಬಂಧಿಸಿದ ನಿಯಮಗಳಿಗೆ ವಿಧಿಸಿದ್ದ ಗಡುವನ್ನು ಮುಂದೂಡಿದೆ. ಫೆಬ್ರವರಿ 8 ರೊಳಗೆ ನವೀಕರಣ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಗಡುವು ವಿಧಿಸಲಾಗಿತ್ತು.

ಇದರಿಂದಾಗಿ ವಾಟ್ಸಾಪ್ ತೊರೆದು ಹೆಚ್ಚಿನ ಸಂಖ್ಯೆಯ ಜನ ಟೆಲಿಗ್ರಾಂ ಮತ್ತು ಸಿಗ್ನಲ್ ಆಪ್ ಗಳ ಮೊರೆಹೋಗಿದ್ದಾರೆ. ಅಪಾರ ಸಂಖ್ಯೆಯ ಜನ ಟೆಲಿಗ್ರಾಂ ಮತ್ತು ಸಿಗ್ನಲ್ ಮೊರೆ ಹೋಗುತ್ತಿರುವುದರಿಂದ ಕಂಗಾಲಾದ ವಾಟ್ಸಾಪ್, ಫೇಸ್ಬುಕ್ ನೊಂದಿಗೆ ಡೇಟಾ ಹಂಚಿಕೊಳ್ಳಲು ಸಂಬಂಧಿಸಿದ ನಿಯಮಗಳ ನವೀಕರಣ ಸ್ವೀಕರಿಸುವ ಗಡುವನ್ನು ಮುಂದೂಡಿದೆ.

ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಡೇಟಾ ಹಂಚಿಕೆ ಬದಲಾವಣೆಯನ್ನು ವಾಟ್ಸಾಪ್ ಮುಂದೂಡಿದೆ. ಫೇಸ್ಬುಕ್ ನೊಂದಿಗೆ ಡೇಟಾ ಹಂಚಿಕೊಳ್ಳುವುದಿಲ್ಲ ಎಂದು ಹೇಳಲಾಗಿದೆ.

ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಸೇರಿದಂತೆ ಅನೇಕರು ವಾಟ್ಸಾಪ್ ಖಾಸಗಿ ಮಾಹಿತಿ ಹಂಚಿಕೊಳ್ಳುತ್ತದೆ ಎಂದು ಕಿಡಿಕಾರಿದ್ದರು. ವಾಟ್ಸಾಪ್ ಹೊಸ ನಿಯಮಗಳ ಕಿರಿಕಿರಿಯಿಂದ ಗ್ರಾಹಕರು ಬೇರೆ ಜಾಲತಾಣಗಳತ್ತ ಮುಖ ಮಾಡಿದ್ದಾರೆ.

ಟೆಲಿಗ್ರಾಂ ಮತ್ತು ಸಿಗ್ನಲ್ ಆಪ್ ಡೌನ್ಲೋಡ್ ಮಾಡಿಕೊಳ್ಳುವವರ ಸಂಖ್ಯೆ ಬಾರಿ ಹೆಚ್ಚಾಗಿದೆ. ಇದರಿಂದ ಕಂಗಾಲಾದ ವಾಟ್ಸಾಪ್ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಡೇಟಾ ಹಂಚಿಕೆ ನಿಯಮ ಗಡುವನ್ನು ಮುಂದೂಡಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...