alex Certify ಹೊಸ ಷರತ್ತು ಹಾಗೂ ನಿಯಮದ ಬಗ್ಗೆ ಬಳಕೆದಾರರಿಗೆ ವಾಟ್ಸಾಪ್ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಷರತ್ತು ಹಾಗೂ ನಿಯಮದ ಬಗ್ಗೆ ಬಳಕೆದಾರರಿಗೆ ವಾಟ್ಸಾಪ್ ಸ್ಪಷ್ಟನೆ

ವಾಟ್ಸಾಪ್​ನ ಹೊಸ ಷರತ್ತು ಹಾಗೂ ನಿಯಮದ ಬಗ್ಗೆ ಸದ್ಯ ಭಾರೀ ಚರ್ಚೆ ಉಂಟಾಗುತ್ತಿದೆ.

ಫೇಸ್​ಬುಕ್​ಗೆ ಬಳಕೆದಾರರ ಎಲ್ಲಾ ಮಾಹಿತಿಯನ್ನ ಹಂಚಿಕೊಳ್ಳುವ ವಾಟ್ಸಾಪ್​ನ ಹೊಸ ನಿರ್ಧಾರದಿಂದಾಗಿ ಬಳಕೆದಾರರು ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಮಾತ್ರವಲ್ಲದೇ ಬೇರೆ ಮೆಸೆಜಿಂಗ್ ಅಪ್ಲಿಕೇಶನ್​ಗಳತ್ತ ಮುಖ ಮಾಡ್ತಿದ್ದಾರೆ.

ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ವಾಟ್ಸಾಪ್​ ನಿಮ್ಮ ಖಾಸಗಿತನಕ್ಕೆ ಅಡ್ಡಿ ತರುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟನೆ ನೀಡಿದೆ.

ನಿಮ್ಮ ಖಾಸಗಿ ಸಂದೇಶಗಳ ಮೇಲೆ ವಾಟ್ಸಾಪ್​ನ ಹೊಸ ಷರತ್ತು ಹಾಗೂ ನಿಯಮ ಪರಿಣಾಮ ಬೀರೋದಿಲ್ಲ. ಈ ಹಿಂದಿನಂತೆಯೇ ನಿಮ್ಮ ವಾಟ್ಸಾಪ್​ ಸಂದೇಶಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್​​ನಲ್ಲೇ ಇರುತ್ತದೆ. ಕೇವಲ ವ್ಯವಹಾರದ ಉದ್ದೇಶದ ಸಂದೇಶಗಳಿಗೆ ಮಾತ್ರ ಹೊಸ ಷರತ್ತು ಹಾಗೂ ನಿಯಮಗಳ ಅನ್ವಯ ಎಂದು ಹೇಳಿದೆ.

ಅಲ್ಲದೇ ಹೊಸ ಷರತ್ತು ಹಾಗೂ ನಿಯಮದ ಪ್ರಕಾರ ವಾಟ್ಸಾಪ್​ ತನ್ನ ಬಳಕೆದಾರರ ಯಾವ ವಿಚಾರಗಳನ್ನ ಹಂಚಿಕೊಳ್ಳಲ್ಲ ಅನ್ನೋದರ ಬಗ್ಗೆಯೂ ವಾಟ್ಸಾಪ್​ ಸ್ಪಷ್ಟ ಮಾಹಿತಿ ನೀಡಿದೆ.

1. ನಿಮ್ಮ ವೈಯಕ್ತಿಕ ಸಂದೇಶ ಹಾಗೂ ಕರೆಗಳನ್ನ ವಾಟ್ಸಾಪ್​ ಕೇಳಿಸಿಕೊಳ್ಳೋದಿಲ್ಲ. ಫೇಸ್​ಬುಕ್ ಕೂಡ ಇದೇ ನಿಯಮವನ್ನ ಅನುಸರಿಸುತ್ತಿದೆ.
2.ನಮ್ಮ ಎಲ್ಲ ಬಳಕೆದಾರರ ಕರೆ ಹಾಗೂ ಸಂದೇಶದ ಮಾಹಿತಿಯನ್ನ ನಾವು ಸ್ಟೋರ್​ ಮಾಡಿಕೊಳ್ಳೋದಿಲ್ಲ .
3. ನಿಮ್ಮ ಕ್ಯಾಂಟಾಕ್ಟ್​ ಲಿಸ್ಟ್​ನ ಮಾಹಿತಿಯನ್ನ ವಾಟ್ಸಾಪ್​ ಫೇಸ್​ಬುಕ್​ ಜೊತೆ ಹಂಚಿಕೊಳ್ಳುವುದಿಲ್ಲ.
4. ನೀವು ಡಿಸಪಿಯರ್​ ಮೆಸೇಜ್​ ಆಯ್ಕೆಯನ್ನ ಸೆಟ್​ ಮಾಡಬಹುದಾಗಿದೆ.
5. ವಾಟ್ಸಾಪ್​ ಹಾಗೂ ಫೇಸ್​ಬುಕ್​ ನೀವು ಶೇರ್​ ಮಾಡಿರುವ ಲೊಕೇಷನ್​ನ್ನು ನೋಡಲಾಗುವುದಿಲ್ಲ.
6. ವಾಟ್ಸಾಪ್​​ ಗ್ರೂಪ್​ಗಳ ಖಾಸಗೀತನಕ್ಕೂ ಭಂಗವಿಲ್ಲ.
7. ನೀವು ನಿಮ್ಮ ಡೇಟಾಗಳನ್ನ ಡೌನ್​ಲೋಡ್​ ಮಾಡಬಹುದಾಗಿದೆ.

— WhatsApp (@WhatsApp) January 12, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...