alex Certify ಐಟಿ ರಿಟರ್ನ್‌ ಸಲ್ಲಿಸುವವರೇ ಗಮನಿಸಿ: ಫಾರ್ಮ್‌ 26A ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿ ರಿಟರ್ನ್‌ ಸಲ್ಲಿಸುವವರೇ ಗಮನಿಸಿ: ಫಾರ್ಮ್‌ 26A ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರದಲ್ಲಿದೆ. ಐಟಿಆರ್ ಸಲ್ಲಿಸಲು ತಯಾರಿ ನಡೆಸುತ್ತಿದ್ದರೆ, ನಿಮಗೆ ಫಾರ್ಮ್ 26 ಎಎಸ್ ಒಂದು ಪ್ರಮುಖ ದಾಖಲೆಯಾಗಿದೆ. ಇದು ವಾರ್ಷಿಕ ತೆರಿಗೆ ಫಾರ್ಮ್ ಆಗಿದೆ.  ಪ್ಯಾನ್ ಸಂಖ್ಯೆಯ ಸಹಾಯದಿಂದ ಫಾರ್ಮನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಡೌನ್ಲೋಡ್ ಮಾಡಬಹುದು.

ಫಾರ್ಮ್ 26 ಎಎಸ್ ಸಹಾಯದಿಂದ ಆದಾಯ ಮತ್ತು ತೆರಿಗೆಯ ಬಗ್ಗೆ ನಿಖರವಾದ ಸ್ಥಿತಿಯನ್ನು ತಿಳಿಯಬಹುದು. ಫಾರ್ಮ್ 26 ಎಎಸ್ ನಲ್ಲಿ  ತೆರಿಗೆಯನ್ನು ಕಡಿತಗೊಳಿಸಿದ ವ್ಯಕ್ತಿಯ ಹೆಸರು, ಟ್ಯಾನ್ ಸಂಖ್ಯೆ ಮತ್ತು ತೆರಿಗೆ ಮೊತ್ತ ಇತ್ಯಾದಿಗಳನ್ನು ಸಹ ಉಲ್ಲೇಖಿಸಲಾಗಿದೆ. ಪಾವತಿಸಿದ ತೆರಿಗೆ ವಿವರಗಳು ಮಾತ್ರ ಫಾರ್ಮ್ 26 ಎಎಸ್ ನಲ್ಲಿ ಇರುವುದಿಲ್ಲ. ಹೆಚ್ಚಿನ ತೆರಿಗೆ ಪಾವತಿಸಿದ್ದರೆ, ಮರುಪಾವತಿ ಸಲ್ಲಿಸಲು ಬಯಸಿದರೆ, ಫಾರ್ಮ್ ನಲ್ಲಿ ಅದರ ಉಲ್ಲೇಖವಿರುತ್ತದೆ.

ಹಣಕಾಸಿನ ವರ್ಷದಲ್ಲಿ ಆದಾಯ ತೆರಿಗೆ ಮರುಪಾವತಿ ಪಡೆದಿದ್ದರೆ ಅದರ ವಿವರಣೆಯೂ ಇದರಲ್ಲಿರುತ್ತದೆ. ಕಾಲಕಾಲಕ್ಕೆ TRACES ನ ವೆಬ್‌ಸೈಟ್‌ನಲ್ಲಿ ಫಾರ್ಮ್ 26 ಎಎಸ್ ಪರಿಶೀಲಿಸಬೇಕು. ಪ್ಯಾನ್ ಸಂಖ್ಯೆ, ಟಿಡಿಎಸ್‌ನೊಂದಿಗೆ ಲಿಂಕ್ ಆಗಿದ್ದರೆ ಈ ವೆಬ್‌ಸೈಟ್‌ನಲ್ಲಿ ತೆರಿಗೆ ಕ್ರೆಡಿಟ್ ನೋಡಬಹುದು.

ಸ್ಥಿರ ಆಸ್ತಿ ಮಾರಾಟದ ಮೇಲಿನ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಯಾವುದೇ ಸ್ಥಿರ ಆಸ್ತಿಯನ್ನು ಮಾರಾಟ ಮಾಡಿದ್ದು, ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಅದಕ್ಕೆ ರಶೀದಿ ನೀಡಲಾಗುತ್ತದೆ. ಅದರ ವಿವರವು ಫಾರ್ಮ್ 26AS ನಲ್ಲಿರುತ್ತದೆ. ಪ್ರತಿ ತಿಂಗಳು 50 ಸಾವಿರಕ್ಕಿಂತ ಹೆಚ್ಚು ಆದಾಯವನ್ನು ಮನೆ ಬಾಡಿಗೆಯಿಂದ ಪಡೆಯುತ್ತಿದ್ದರೆ ಅದರ ಮೇಲೆ ಟಿಡಿಎಸ್ ಕಡಿತಗೊಳ್ಳುತ್ತದೆ. ತೆರಿಗೆ ಮೊತ್ತವನ್ನು ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದ್ರ ವಿವರ ಕೂಡ ಫಾರ್ಮ್ 26ಎಎಸ್ ನಲ್ಲಿರುತ್ತದೆ.

ಇದಲ್ಲದೆ ಬ್ಯಾಂಕ್ ಅಥವಾ ಸಂಸ್ಥೆಯಿಂದ ಹೆಚ್ಚಿನ ವಹಿವಾಟು ನಡೆಸಿದ್ದರೆ ಅದರ ವಿವರವನ್ನು ಬ್ಯಾಂಕ್ ಸರ್ಕಾರಕ್ಕೆ ನೀಡುತ್ತದೆ. ಈ ವಿವರವನ್ನು ನೀವು ಫಾರ್ಮ್ 26ಎಎಸ್ ನಲ್ಲಿ ಬರೆಯಬೇಕು. ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡಿದ್ದರೆ, ಆಸ್ತಿ ಖರೀದಿ ಮಾಡಿದ್ದರೆ ಅಥವಾ ಕಾರ್ಪೋರೇಟ್ ಬಾಂಡ್ ನಲ್ಲಿ ಹಣ ಹೂಡಿಕೆ ಮಾಡಿದ್ದರೆ ಅದನ್ನೂ ಇದ್ರಲ್ಲಿ ನಮೂದಿಸಬೇಕು.

ಫಾರ್ಮ್ 26 ಎಎಸ್ ಡೌನ್‌ಲೋಡ್ ಮಾಡಲು, ಆದಾಯ ತೆರಿಗೆ ಸಲ್ಲಿಸುವ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬೇಕು. ಖಾತೆ ವಿಭಾಗದಲ್ಲಿ, ಫಾರ್ಮ್ 26 ಎಎಸ್ ಟ್ಯಾಬ್ ಕ್ಲಿಕ್ ಮಾಡಬೇಕು. ಮೌಲ್ಯಮಾಪನ ವರ್ಷವನ್ನು ನಮೂದಿಸಿದ ನಂತರ ಫಾರ್ಮ್  ಡೌನ್‌ಲೋಡ್ ಮಾಡಬಹುದು.ಫಾರ್ಮ್ 26 ಎಎಸ್ ಡೌನ್ಲೋಡ್ ಮಾಡಲು ಜನ್ಮದಿನವನ್ನು ಪಾಸ್‌ವರ್ಡ್ ಆಗಿ ಬಳಸಲಾಗುತ್ತದೆ.

ನೌಕರ ತನ್ನ ಕಂಪನಿಯ ತೆರಿಗೆ ಮಾಹಿತಿಯನ್ನು ಫಾರ್ಮ್ 26 ಎಎಸ್‌ನಲ್ಲಿ ನವೀಕರಿಸಲಾಗಿದೆಯೆ ಅಥವಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. ಟಿಡಿಎಸ್ ಆದಾಯವನ್ನು ಸಾಮಾನ್ಯವಾಗಿ ಎರಡು ದಿನಗಳಲ್ಲಿ ನವೀಕರಿಸಲಾಗುತ್ತದೆ.   ಪಾನ್ ಸಂಖ್ಯೆ ತಪ್ಪಾಗಿ ನಮೂದಿಸಿದ್ದರೆ ಫಾರ್ಮ್ 26 ಎಎಸ್ ನಲ್ಲಿ ತೆರಿಗೆ ಮಾಹಿತಿ ನೋಡಲು ಸಾಧ್ಯವಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...