alex Certify GOOD NEWS: ವೊಡಾಫೋನ್-ಐಡಿಯಾ ಗ್ರಾಹಕರಿಗೆ ಸಿಗ್ತಿದೆ 14 ಜಿಬಿ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ವೊಡಾಫೋನ್-ಐಡಿಯಾ ಗ್ರಾಹಕರಿಗೆ ಸಿಗ್ತಿದೆ 14 ಜಿಬಿ ಡೇಟಾ

Voda-Idea अपने यूजर्स को फ्री दे रहा है 14GB डेटा और कॉलिंग

ವೊಡಾಫೋನ್ ಐಡಿಯಾ ಈಗ ಆಯ್ದ ಬಳಕೆದಾರರಿಗೆ 2 ಜಿಬಿ ದೈನಂದಿನ ಡೇಟಾ ಮತ್ತು ಅನಿಯಮಿತ ಉಚಿತ ಕರೆ ನೀಡುತ್ತಿದೆ. ಈ ಉಚಿತ ಪ್ರಯೋಜನಗಳನ್ನು ಗ್ರಾಹಕರಿಗೆ ಏಳು ದಿನಗಳ ಮಾನ್ಯತೆಯೊಂದಿಗೆ ನೀಡಲಾಗುತ್ತಿದೆ. ಈ ವೇಳೆ ಗ್ರಾಹಕರು 14 ಜಿಬಿ ಡೇಟಾದ ಲಾಭ ಪಡೆಯಲಿದ್ದಾರೆ.

ಹೊಸ ಕೊಡುಗೆಗೆ ಕಂಪನಿ ಯಾವುದೇ ಶುಲ್ಕ ಪಡೆಯುತ್ತಿಲ್ಲ. ಅಸ್ತಿತ್ವದಲ್ಲಿರುವ ಯೋಜನೆ ಮೂಲಕವೇ ಗ್ರಾಹಕರಿಗೆ ಇದ್ರ ಲಾಭ ನೀಡಲಾಗ್ತಿದೆ. ವೊಡಾಫೋನ್-ಐಡಿಯಾ ಗ್ರಾಹಕರು 121363 ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ನೀವು ಈ ಪ್ಲಾನ್ ಪಡೆಯಲು ಅರ್ಹವಾಗಿದ್ದರೆ ನಿಮಗೆ ಎಸ್ಎಂಎಸ್ ಬರುತ್ತದೆ.

ಲಾಕ್ ಡೌನ್ ಬೇಸರ ಕಳೆಯಲು ಗ್ರಾಹಕರಿಗೆ ಕಂಪನಿ ಈ ಪ್ಲಾನ್ ನೀಡ್ತಿದೆ. ಈ ಆಫರ್ ಬಗ್ಗೆ ಅನೇಕ ಟ್ವೀಟ್ ಮಾಡಲಾಗ್ತಿದೆ. ಆದ್ರೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎನ್ನಲಾಗ್ತಿದೆ. ಖಾಸಗಿ ಪ್ರಕಟಣೆಯ ವರದಿಯ ಪ್ರಕಾರ, ವೊಡಾಫೋನ್ ಐಡಿಯಾದಿಂದ ಚೆನ್ನೈ, ಕೋಲ್ಕತಾ, ನವದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶ ವಲಯಗಳಲ್ಲಿ ಗ್ರಾಹಕರಿಗೆ ಹೆಚ್ಚುವರಿ 2 ಜಿಬಿ ಡೇಟಾ ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...