alex Certify ಭಯಾನಕ ಮುಖವಾಡ ಧರಿಸಿ ಪತ್ನಿಯನ್ನು ಬೆಚ್ಚಿಬೀಳಿಸಿದ ಪತಿ: ಒಡೆದು ಚೂರಾದ ಕನ್ನಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಯಾನಕ ಮುಖವಾಡ ಧರಿಸಿ ಪತ್ನಿಯನ್ನು ಬೆಚ್ಚಿಬೀಳಿಸಿದ ಪತಿ: ಒಡೆದು ಚೂರಾದ ಕನ್ನಡಿ….!

ಗಂಡನೊಬ್ಬ ಹೆಂಡತಿಯನ್ನು ಭಯಾನಕವಾಗಿ ಹೆದರಿಸಿದ ವಿಡಿಯೋ ಒಂದು ವೈರಲ್​ ಆಗಿದೆ. ಹೆಚ್ಚೂ ಕಡಿಮೆಯಾದರೂ ಗಂಡನ ತಲೆಗೆ ಸುತ್ತಿಗೆ ಏಟು ಬೀಳುವಷ್ಟರ ಮಟ್ಟಿಗೆ ಈ ಘಟನೆ ಭಯಾನಕವಾಗಿತ್ತು.

ಭಯಾನಕ ಹಸಿರು ಮುಖವಾಡದಲ್ಲಿ ಕನ್ನಡಿಯ ಬಳಿ ನಿಂತಿರುವ ಪತಿಯನ್ನು ವಿಡಿಯೋದಲ್ಲಿ ನೋಡಬಹುದು. ಪತ್ನಿ ಒಳಗೆ ಬರುತ್ತಿದ್ದಂತೆಯೇ ಆತ ಪತ್ನಿಯನ್ನು ಹೆದರಿಸುತ್ತಾನೆ. ಆಕೆ ತನ್ನ ಕೈಯಲ್ಲಿದ್ದ ಸುತ್ತಿಗೆಯಿಂದ ಹೊಡೆಯಲು ಮುಂದಾದಾಗ ಗಂಡ ತಪ್ಪಿಸಿಕೊಳ್ಳುತ್ತಾನೆ. ಸುತ್ತಿಗೆ ಕನ್ನಡಿಗೆ ಬೀಳುವ ಕಾರಣ ಕನ್ನಡಿ ಒಡೆದು ಹೋಗುತ್ತದೆ.

ಶಾಕ್​ನಲ್ಲಿ ಇರುವ ಮಹಿಳೆ ಕಿರುಚುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ನಂತರ ಅದು ಪತಿ ಎಂದು ತಿಳಿದ ತಕ್ಷಣ ಆಕೆ ಸಹಜ ಸ್ಥಿತಿಗೆ ಬರುತ್ತಾಳೆ. ನಂತರ ಇಬ್ಬರೂ ತಮ್ಮ ದಾಂಪತ್ಯದ ಗುಟ್ಟನ್ನು ಬಿಚ್ಚಿಡುತ್ತಾರೆ. ಹೀಗೆ ಸದಾ ತಮಾಷೆ ಮಾಡಿಕೊಂಡು ಜೀವನ ಮಾಡುತ್ತೇವೆ ಎನ್ನುತ್ತಾರೆ.

ಈ ವಿಡಿಯೋ ಪೂರ್ವ ನಿಯೋಜಿತ. ಇಲ್ಲದಿದ್ದರೆ ಪತ್ನಿ ಮೊದಲೇ ಸುತ್ತಿಗೆ ಹಿಡಿದುಕೊಂಡು ಏಕೆ ಬರುತ್ತಿದ್ದಳು ಎಂದು ಹಲವರು ಕಮೆಂಟ್​ನಲ್ಲಿ ಹೇಳಿದ್ದಾರೆ. ಆದರೆ ಇವರ ಯಶಸ್ವಿ ದಾಂಪತ್ಯಕ್ಕೆ ಹಲವರು ಶುಭ ಕೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...