alex Certify 300 ರೂ. ಲಾಭದ ಜೊತೆ 84 ಜಿಬಿಗಿಂತ ಹೆಚ್ಚು ಡೇಟಾ ನೀಡ್ತಿದೆ ಈ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

300 ರೂ. ಲಾಭದ ಜೊತೆ 84 ಜಿಬಿಗಿಂತ ಹೆಚ್ಚು ಡೇಟಾ ನೀಡ್ತಿದೆ ಈ ಕಂಪನಿ

ಅಗ್ಗದ ಬೆಲೆಗೆ ಹೆಚ್ಚಿನ ಡೇಟಾ ಪಡೆಯಲು ಬಯಸಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. 4ಜಿ ಇಂಟರ್ನೆಟ್ ಸ್ಪೀಡ್ ಗೆ ನೀವು 84 ಜಿಬಿಗಿಂತ ಹೆಚ್ಚಿನ ಡೇಟಾವನ್ನು ಪಡೆಯಬಹುದು. ಇದ್ರ ಜೊತೆ 300 ರೂಪಾಯಿ ಲಾಭವಾಗಲಿದೆ. ಯಸ್, ಟೆಲಿಕಾಂ ಕಂಪನಿ ವೋಡಾಫೋನ್ –ಐಡಿಯಾ ಈ ಆಫರ್ ನೀಡ್ತಿದೆ.

ಕಂಪನಿ ಗ್ರಾಹಕರಿಗಾಗಿ 699 ರೂಪಾಯಿ ಪ್ಲಾನ್ ಬಿಡುಗಡೆ ಮಾಡಿದೆ. ಈ ಯೋಜನೆ ಸಿಂಧುತ್ವ 84 ದಿನಗಳು. ಈ ಯೋಜನೆಯಲ್ಲಿ ಅನಿಯಮಿತ ಕರೆ, ಪ್ರತಿ ದಿನ 100 ಎಸ್ಎಂಎಸ್ ಹಾಗೂ ಪ್ರತಿ ದಿನ 4ಜಿಬಿ ಡೇಟಾ ಸಿಗಲಿದೆ. ಅಂದ್ರೆ 84 ದಿನಗಳಿಗೆ ಒಟ್ಟೂ 336 ಜಿಬಿ ಡೇಟಾ ಸಿಗಲಿದೆ. ಇದಲ್ಲದೆ ಕಂಪನಿ ಈ ಪ್ಲಾನ್ ನಲ್ಲಿ Binge All Night ಆಫರ್ ನೀಡ್ತಿದೆ. ಅಂದ್ರೆ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಉಚಿತ ಡೇಟಾ ಸಿಗಲಿದೆ. ಇದಲ್ಲದೆ ಕಂಪನಿ ವಿಐ ಸಿನಿಮಾ ಮತ್ತು ಟಿವಿ ಚಂದಾದಾರಿಕೆ ನೀಡ್ತಿದೆ.

ದೇಶದ ದೊಡ್ಡ ಕಂಪನಿ ಜಿಯೋ 999 ರೂಪಾಯಿ ಪ್ಲಾನ್ ನೀಡ್ತಿದೆ. ಈ ಯೋಜನೆ ಸಿಂಧುತ್ವ 84 ದಿನಗಳು. 3ಜಿಬಿ ಹೈಸ್ಪೀಡ್ ವೇಗದಲ್ಲಿ 4ಜಿ ಡೇಟಾ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...