alex Certify ಬಿಎಸ್ 4 ವಾಹನ ಮಾಲೀಕರಿಗೆ ಸಾರಿಗೆ ಇಲಾಖೆಯಿಂದ ‘ಶುಭ ಸುದ್ದಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಎಸ್ 4 ವಾಹನ ಮಾಲೀಕರಿಗೆ ಸಾರಿಗೆ ಇಲಾಖೆಯಿಂದ ‘ಶುಭ ಸುದ್ದಿ’

ಬೆಂಗಳೂರು: ಲಾಕ್ ಡೌನ್ ನಿಂದಾಗಿ ಬಿಎಸ್ 4 ಮಾಪನದ ವಾಹನಗಳ ನೋಂದಣಿ ಮಾಡಿಸದ ಗ್ರಾಹಕರಿಗೆ ಸಾರಿಗೆ ಇಲಾಖೆಯಿಂದ ಶುಭ ಸುದ್ದಿ ನೀಡಲಾಗಿದೆ.

ಏಪ್ರಿಲ್ 30 ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಾಹನಗಳ ಮಾಲೀಕರು ಸಂಬಂಧಿಸಿದ ಸಾರಿಗೆ ಇಲಾಖೆ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ 2020ರ ಮಾರ್ಚ್ 31 ಕ್ಕೆ ಮೊದಲು ಬಿಎಸ್ 4 ವಾಹನಗಳು ಮಾರಾಟವಾಗಿ ತಾತ್ಕಾಲಿಕ ನೋಂದಣಿಯಾಗಿರಬೇಕಿತ್ತು. ಈಗಾಗಲೇ ತೆರಿಗೆ, ಶುಲ್ಕ ಪಾವತಿಸಿರುವ ಮತ್ತು ಪಾವತಿಸಬೇಕಿರುವ ಎಲ್ಲಾ ಬಿಎಸ್ 4 ವಾಹನಗಳಿಗೆ ಏಪ್ರಿಲ್ 30 ರೊಳಗೆ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.

ಏಪ್ರಿಲ್ 1 ರಿಂದ ದೇಶಾದ್ಯಂತ ಬಿಎಸ್ 6 ಮಾನದಂಡ ಜಾರಿಯಾಗಿ ಈ ಮಾಪನದ ಇಂತಹ ವಾಹನಗಳಿಗೆ ಬಿಎಸ್ ಗುಣಮಟ್ಟದ ಇಂಧನ ಪೂರೈಕೆ ಕಡ್ಡಾಯ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...