alex Certify ಜೂನ್ 8 ರಿಂದ ತೆರೆಯಲಿರುವ ಮಾಲ್‌ ಪ್ರವೇಶಿಸಲು ಅನುಸರಿಸಬೇಕು ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂನ್ 8 ರಿಂದ ತೆರೆಯಲಿರುವ ಮಾಲ್‌ ಪ್ರವೇಶಿಸಲು ಅನುಸರಿಸಬೇಕು ಈ ನಿಯಮ

ಅನ್ಲಾಕ್ ಒನ್ ನಿಯಮದಡಿ ಜೂನ್ 8ರಿಂದ ಮಾಲ್ ಗಳ ಬಾಗಿಲು ತೆರೆಯಲಿದೆ. ಆದ್ರೆ ಶಾಪಿಂಗ್ ಮಾಲ್ ನಲ್ಲಿ ಖರೀದಿ, ಸುತ್ತಾಟ ಮೊದಲಿನಂತೆ ಇರುವುದಿಲ್ಲ. ಹೊಸ ನಿಯಮ ಪ್ರತಿಯೊಬ್ಬ ಗ್ರಾಹಕ ಮತ್ತು ವ್ಯಾಪಾರಿಗಳಿಗೆ ಅನ್ವಯವಾಗಲಿದೆ.

ಮಾಲ್ ಗಳಲ್ಲಿ ಸುರಕ್ಷತೆಗೆ ಹೆಚ್ಚು ಗಮನ ನೀಡಲಾಗುವುದು. ಈ ಬಗ್ಗೆ ಮಾಲ್, ಗ್ರಾಹಕರಿಗೆ ಭರವಸೆ ನೀಡುವ ಅಗತ್ಯವಿದೆ. ಗ್ರಾಹಕರು ಮತ್ತು ಅಂಗಡಿ ಮಾಲೀಕರಿಗೆ ಆರೋಗ್ಯ ಸೇತು ಅಪ್ಲಿಕೇಷನ್ ಕಡ್ಡಾಯವಾಗಲಿದೆ. ಮಾಸ್ಕ್, ನೈರ್ಮಲ್ಯೀಕರಣ ಮತ್ತು ಥರ್ಮಲ್ ಸ್ಕ್ರೀನಿಂಗ್ ಸಹ ಕಡ್ಡಾಯವಾಗಿದೆ.

ಎಸ್ಕಲೇಟರ್‌ಗಳಲ್ಲಿ ಒಂದು ಸಮಯದಲ್ಲಿ 3 ಕ್ಕಿಂತ ಹೆಚ್ಚು ಜನರು ಹೋಗುವಂತಿಲ್ಲ. 2 ಜನರ ನಡುವೆ 3 ಮೆಟ್ಟಿಲುಗಳ ವ್ಯತ್ಯಾಸವಿರುತ್ತದೆ. ಮೇಕಪ್ ಉತ್ಪನ್ನಗಳು, ಬೂಟುಗಳು ಮತ್ತು ಸುಗಂಧ ದ್ರವ್ಯಗಳಂತಹ ಪ್ರಯೋಗಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...