alex Certify ಫೆಬ್ರವರಿ 1ರಂದು ಮಂಡನೆಯಾಗಲಿದೆ ಕೇಂದ್ರ ಸರ್ಕಾರದ ಬಜೆಟ್.​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿ 1ರಂದು ಮಂಡನೆಯಾಗಲಿದೆ ಕೇಂದ್ರ ಸರ್ಕಾರದ ಬಜೆಟ್.​​..!

ಈ ಬಾರಿಯ ಕೇಂದ್ರ ಬಜೆಟ್​​ ಫೆಬ್ರವರಿ 1ರಂದು ಮಂಡನೆಯಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಮಿತಿ ಮಾಹಿತಿ ನೀಡಿದೆ. ಜನವರಿ 29ರಿಂದ ಸಂಸತ್​ ಬಜೆಟ್​ ಅಧಿವೇಶನ ಆರಂಭವಾಗಲಿದ್ದು ಈ ದಿನ ಲೋಕಸಭೆ ಹಾಗೂ ರಾಜ್ಯಸಭೆಗಳನ್ನುದ್ದೇಶಿಸಿ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಮಾತನಾಡಲಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್​ ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದೆ. ಜನವರಿ 29ರಿಂದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಭಾಷಣದಿಂದ ಆರಂಭವಾಗುವ ಅಧಿವೇಶನ ಫೆಬ್ರವರಿ 15ರಂದು ಅಂತ್ಯವಾಗಲಿದೆ. ಎರಡನೇ ಹಂತ ಮಾರ್ಚ್ 8ಕ್ಕೆ ಆರಂಭವಾಗಿ ಏಪ್ರಿಲ್​ 8ಕ್ಕೆ ಕೊನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆ ಹಾಗೂ ಲೋಕಸಭೆಯ ಸಂಸತ್​ ಕಲಾಪ ಪ್ರತಿದಿನ ನಾಲ್ಕು ಗಂಟೆಗಳ ಅವಧಿಯಲ್ಲಿ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...