ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ 2017 ರಲ್ಲಿ ಎಂ ಆಧಾರ್ ಆಪ್ ಪ್ರಾರಂಭಿಸಿತು. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಬಳಕೆದಾರರು ಆಧಾರ್ ಕಾರ್ಡನ್ನು ಕಾಗದದ ರೂಪದಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ.
ಈ ಅಪ್ಲಿಕೇಶನನ್ನು ಯುಐಡಿಎಐ ರಚಿಸಿದೆ. ಈ ಅಪ್ಲಿಕೇಶನ್ ಬಗ್ಗೆ ಯುಐಡಿಎಐ ಈಗ ಮತ್ತೊಂದು ನವೀಕರಣ ಮಾಡಿದೆ. ಇನ್ಮುಂದೆ 5 ಜನರ ಆಧಾರ್ ಕಾರ್ಡ್ ಪ್ರೊಫೈಲ್‌ಗಳನ್ನು ಎಂಆಧಾರ್ ನಲ್ಲಿ ಸೇರಿಸಬಹುದು.
ಅಪ್ಲಿಕೇಶನ್ ಬಗ್ಗೆ ಯುಐಡಿಎಐ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಈ ಮೊದಲು ಗರಿಷ್ಠ ಮೂರು ಪ್ರೊಫೈಲ್‌ಗಳನ್ನು ಎಂಆಧಾರ್ ಗೆ ಸೇರಿಸಬಹುದಿತ್ತು. ಬಳಕೆದಾರರ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ವಿಳಾಸದ ಜೊತೆಗೆ ಫೋಟೋ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು. ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ ಎಂಆಧಾರ್ ಡೌನ್ಲೋಡ್ ಮಾಡಬೇಕು. ಈ ಅಪ್ಲಿಕೇಶನ್ ಬಳಸಲು, ಬಳಕೆದಾರರು ಹೆಸರು ನೋಂದಾಯಿಸಿಕೊಳ್ಳಬೇಕು.
ಹೀಗೆ ಮಾಡಿದ್ರೆ ನಿಮಗೆ ಸಿಗಲಿದೆ ಅಮೆಜಾನ್, ನೆಟ್ಫ್ಲಿಕ್ಸ್ ಉಚಿತ ಚಂದಾದಾರಿಕೆ
ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿರಿಸಲು, ಬಯೋಮೆಟ್ರಿಕ್ ಲಾಕಿಂಗ್ ಮತ್ತು ಅನ್ಲಾಕಿಂಗ್ ವ್ಯವಸ್ಥೆಯನ್ನು ಅಪ್ಲಿಕೇಶನ್‌ನಲ್ಲಿ ನೀಡಲಾಗಿದೆ. ಅಪ್ಲಿಕೇಶನ್‌ನಲ್ಲಿ ಒಟಿಪಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ತಮ್ಮ ಪ್ರೊಫೈಲ್ ನವೀಕರಿಸಲು ಸಹ ಸಾಧ್ಯವಾಗುತ್ತದೆ.