alex Certify ರೈಲು ಪ್ರಯಾಣಿಕರೇ ಗಮನಿಸಿ: ರಾತ್ರಿ ವೇಳೆ ಲಭ್ಯವಿರೋಲ್ಲ‌ ಮೊಬೈಲ್ ಚಾರ್ಜಿಂಗ್‌ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರೇ ಗಮನಿಸಿ: ರಾತ್ರಿ ವೇಳೆ ಲಭ್ಯವಿರೋಲ್ಲ‌ ಮೊಬೈಲ್ ಚಾರ್ಜಿಂಗ್‌ ಸೌಲಭ್ಯ

ರೈಲಿನಲ್ಲಿ ರಾತ್ರಿ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಶಾಕ್​ ನೀಡಿದೆ. ರಾತ್ರಿ ಪ್ರಯಾಣ ಮಾಡೋ ಪ್ರಯಾಣಿಕರಿಗೆ ಚಾರ್ಜಿಂಗ್​ ಸೌಕರ್ಯ ನೀಡೋದಿಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ.

ಬೆಂಕಿ ಅವಘಡದಂತಹ ಪ್ರಕರಣಗಳು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಈ ಕ್ರಮವನ್ನ ಕೈಗೊಳ್ಳಲಾಗಿದೆ. ದೆಹಲಿ – ಡೆಹರಾಡೂನ್​ ಶತಾಬ್ದಿ ಎಕ್ಸ್​ಪ್ರೆಸ್​ನಲ್ಲಿ ಮಾರ್ಚ್​ 13ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 8 ಕೋಚ್​ಗಳಿಗೆ ಬೆಂಕಿ ಆವರಿಸಿತ್ತು.

ಇದು ಮಾತ್ರವಲ್ಲದೇ ಧೂಮಪಾನಿಗಳ ಹಾವಳಿಗೂ ರೈಲ್ವೆ ಇಲಾಖೆ ಲಗಾಮು ಹಾಕಲು ನಿರ್ಧರಿಸಲಾಗಿದೆ. ಇಂತಹ ಅಪರಾಧ ಎಸಗುವವರಿಗೆ ಶಿಕ್ಷೆಯ ಪ್ರಮಾಣವನ್ನ ಹೆಚ್ಚಿಸೋಕೆ ಚರ್ಚೆ ನಡೆಯುತ್ತಿದೆ. ರೈಲಿನ ಒಳಗೆ ಧೂಮಪಾನ ಮಾಡುವವರಿಗೆ ರೈಲ್ವೆ ಆಕ್ಟ್ ಸೆಕ್ಷನ್​ 167ರ ಅಡಿಯಲ್ಲಿ 100 ರೂಪಾಯಿ ದಂಡ ವಿಧಿಸಲಾಗ್ತಿದೆ.

ಪ್ರಯಾಣಿಕರ ಸುರಕ್ಷತೆಯನ್ನ ಗಮನದಲ್ಲಿ ಇಟ್ಟುಕೊಂಡು ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ಚಾರ್ಜಿಂಗ್​ ಪೋರ್ಟಲ್​ ಬಂದ್​ ಇರಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿ ಸುಮಿತ್​ ಠಾಕೂರ್​ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...