alex Certify ಲಾಭದ ನಿರೀಕ್ಷೆಯಲ್ಲಿ ಟೊಯೋಟಾ ಕಿರ್ಲೋಸ್ಕರ್​ ಮೋಟರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಭದ ನಿರೀಕ್ಷೆಯಲ್ಲಿ ಟೊಯೋಟಾ ಕಿರ್ಲೋಸ್ಕರ್​ ಮೋಟರ್ಸ್

ಕೊರೊನಾ ಸಾಂಕ್ರಾಮಿಕದಿಂದಾಗಿ 2020ರಲ್ಲಿ ಭಾರತದ ಆಟೋಮೊಬೈಲ್​​ ಲೋಕದಲ್ಲಿ ಸಾಕಷ್ಟು ಏರಿಳಿತ ಉಂಟಾಗಿದೆ. ಹೀಗಾಗಿ 2021ನ್ನ ಭರವಸೆಯ ವರ್ಷ ಎಂದು ಭಾವಿಸಿರುವ ಟೊಯೋಟಾ ಕಿರ್ಲೋಸ್ಕರ್​ ಮೋಟರ್​ ಈ ವರ್ಷ ಉತ್ತಮ ಕಾರು ಮಾರಾಟದ ನಿರೀಕ್ಷೆಯನ್ನ ಹೊತ್ತುಕ್ಕೊಂಡಿದೆ.

ಅಂದಹಾಗೆ ಟೊಯೋಟಾ ಕಿರ್ಲೋಸ್ಕರ್​ ಈ ವರ್ಷದ ಮೇಲೆ ಇಷ್ಟೊಂದು ಭರವಸೆ ಇಟ್ಟುಕೊಳ್ಳೋಕೆ ಕಾರಣ ಏನು ಅನ್ನೋದನ್ನ ನೀವು ಕೇಳಬಹುದು. ಹೊಸ ಉತ್ಪನ್ನದ ಪ್ರಾರಂಭ ಹಾಗೂ ವರ್ಷಾಂತ್ಯದಲ್ಲಿ ಕಂಡು ಬಂದ ಆರ್ಥಿಕ ಚೇತರಿಕೆ ಈ ನಿರೀಕ್ಷೆಗೆ ಕಾರಣವಾಗಿದೆ. ಟೋಯೋಟಾ ಮೋಟರ್ಸ್​ ಅಕ್ಟೋಬರ್​ – ನವೆಂಬರ್​ನಲ್ಲಿ ಮೋಟಾರ್​​ ಸಗಟು ಮಾರಾಟದಲ್ಲಿ ಶೇಕಡಾ 6ರಷ್ಟು ಏರಿಕೆ ಕಂಡಿದೆ. ಮಾತ್ರವಲ್ಲದೇ ಡಿಸೆಂಬರ್​ನಲ್ಲಿ 17 ಪ್ರತಿಶತ ಏರಿಕೆ ಕಂಡಿದೆ.

ಟೋಯೋಟಾ ಮೋಟರ್ಸ್​ನ ಈ ಬೆಳವಣಿಗೆ ಜನವರಿಯಲ್ಲೂ ಮುಂದುವರಿಯುತ್ತೆ ಎಂಬ ನಂಬಿಕೆಯಿದೆ. ನಾವು ಈಗಾಗಲೇ ಮಾರುಕಟ್ಟೆಗೆ ಮೂರು ಹೊಸ ಉತ್ಪನ್ನಗಳನ್ನ ಪರಿಚಯಿಸಿದ್ದೇವೆ. 2020ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ಒಳ್ಳೆಯ ಲಾಭದ ನಿರೀಕ್ಷೆಯಿದೆ ಎಂದು ಟೊಯೋಟಾ ಕಿರ್ಲೊಸ್ಕರ್​ ಮೋಟರ್ಸ್​ ಹಿರಿಯ ಉಪಾಧ್ಯಕ್ಷ ನವೀನ್​ ಸೋನಿ ಹೇಳಿದ್ದಾರೆ.

ಟೊಯೋಟಾ ಕಂಪನಿಯು ಟೊಯೋಟಾ ಫಾರ್ಚೂನರ್​​ ಎಸ್​ಯುವಿ, ಇನ್ನೋವಾ ಕ್ರಿಸ್ಟಾದ ಹೊಸ ಪುನರಾವರ್ತನೆ, ಟೊಯೋಟಾ ಅರ್ಬನ್​ ಕ್ರೂಸರ್​ನ್ನೂ ಕೆಲ ಸಮಯದ ಹಿಂದೆ ಬಿಡುಗಡೆ ಮಾಡಿದೆ. ಅಲ್ಲದೇ ಸುಜುಕಿಯೊಂದಿಗಿನ ಸಹಭಾಗಿತ್ವವೂ ನಮಗೆ ವರದಾನವಾಗಲಿದೆ ಎಂದು ಕಂಪನಿ ನಂಬಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...