alex Certify 250 ರೂ.ಗಿಂತಲೂ ಕಡಿಮೆ ಬೆಲೆಗೆ ಈ ಪ್ಲಾನ್ ನೀಡ್ತಿದೆ ಜಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

250 ರೂ.ಗಿಂತಲೂ ಕಡಿಮೆ ಬೆಲೆಗೆ ಈ ಪ್ಲಾನ್ ನೀಡ್ತಿದೆ ಜಿಯೋ

Reliance Jio: ये हैं टॉप 5 प्रीपेड प्लान्स, कीमत 250 रुपये से कम

ನೀವು ಜಿಯೋ ಗ್ರಾಹಕರಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಜಿಯೋ 250 ರೂಪಾಯಿಗಿಂತ ಕಡಿಮೆ ಬೆಲೆಗೆ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಜಿಯೋದ ಐದು ಯೋಜನೆಗಳು 250 ರೂಪಾಯಿಗಿಂತ ಕಡಿಮೆಯಿದ್ದು ಇದ್ರಲ್ಲಿ ಡೇಟಾ, ಕರೆ, ಎಸ್ ಎಂ ಎಸ್ ಸೌಲಭ್ಯಗಳು ಸಿಗ್ತಿವೆ.

98 ರೂಪಾಯಿ ಯೋಜನೆ 28 ದಿನಗಳ ಮಾನ್ಯತೆ ಹೊಂದಿದೆ. ಇದ್ರಲ್ಲಿ 2ಜಿಬಿ ಡೇಟಾ ಸಿಗಲಿದೆ. ಜಿಯೋ ನೆಟ್ವರ್ಕ್ ಗೆ ಅನಿಯಮಿತ ಕರೆ ಸೌಲಭ್ಯವಿದ್ದು, ಇತರ ನೆಟ್‌ವರ್ಕ್‌ಗಳಲ್ಲಿ ಕರೆ ಮಾಡಲು ಗ್ರಾಹಕರು ನಿಮಿಷಕ್ಕೆ 6 ಪೈಸೆ ಪಾವತಿಸಬೇಕಾಗುತ್ತದೆ. ಇದಲ್ಲದೆ, 300 ಎಸ್‌ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ಸಿಗಲಿದೆ.

129 ರೂಪಾಯಿ ಯೋಜನೆ 28 ದಿನಗಳ ಮಾನ್ಯತೆ ಹೊಂದಿದೆ. ಗ್ರಾಹಕರಿಗೆ 2 ಜಿಬಿ ಡೇಟಾ ಸಿಗ್ತಿದೆ. ಜಿಯೋ ನೆಟ್ವರ್ಕ್ ಗೆ ಅನಿಯಮಿತ ಕರೆ ಜೊತೆ 300 ಎಸ್‌ಎಂಎಸ್ ಉಚಿತವಾಗಿ ನೀಡಲಾಗ್ತಿದೆ.

149 ರೂಪಾಯಿ ಯೋಜನೆ 24 ದಿನಗಳ ಮಾನ್ಯತೆ ಹೊಂದಿದೆ. ಗ್ರಾಹಕರಿಗೆ ಪ್ರತಿ ದಿನ 1 ಜಿಬಿ ಡೇಟಾ ಸಿಗಲಿದೆ. ಬೇರೆ ನೆಟ್ವರ್ಕ್ ಗೆ 300 ನಿಮಿಷಗಳು ಲಭ್ಯವಿದೆ. ಇದಲ್ಲದೆ ಪ್ರತಿ ದಿನ 100 ಎಸ್‌ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡಲಾಗ್ತಿದೆ.

199 ರೂಪಾಯಿ ಯೋಜನೆ  28 ದಿನಗಳ ಸಿಂಧುತ್ವ ಹೊಂದಿದೆ. ಪ್ರತಿ ದಿನ 1.5ಜಿಬಿ ಡೇಟಾ ಲಭ್ಯವಿದೆ. ಇತರ ನೆಟ್ವರ್ಕ್ ಗೆ1000 ನಿಮಿಷಗಳು ಉಚಿತವಾಗಿ ಸಿಗ್ತಿದೆ. ಪ್ರತಿ ದಿನ 100 ಎಸ್‌ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ.

249 ರೂಪಾಯಿ ಯೋಜನೆ ಸಿಂಧುತ್ವ  28 ದಿನಗಳು. 2 ಜಿಬಿ ಡೇಟಾ ಪ್ರತಿ ದಿನ ಸಿಗಲಿದೆ. 1000 ನಿಮಿಷಗಳು ಉಚಿತವಾಗಿ ಸಿಗಲಿದೆ. 100 ಎಸ್‌ಎಂಎಸ್  ಲಭ್ಯವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...