alex Certify ಬಿಗ್‌ ನ್ಯೂಸ್: ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಬ್ಯಾಂಕುಗಳಿಂದ ʼಬಂಪರ್ʼ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಬ್ಯಾಂಕುಗಳಿಂದ ʼಬಂಪರ್ʼ ಕೊಡುಗೆ

ಸಾಲು ಸಾಲು ಹಬ್ಬಗಳ ಸಂಭ್ರಮದಲ್ಲಿರುವ ಗ್ರಾಹಕರಿಗೆ ಹಬ್ಬದ ವಿಶೇಷವಾಗಿ ದೇಶದ ಉನ್ನತ ಬ್ಯಾಂಕ್​ಗಳು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡಲು ಮುಂದಾಗಿವೆ. ‌

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ, ಕೊಟಕ್​ ಮಹೀಂದ್ರಾ ಬ್ಯಾಂಕ್​ , ಆಕ್ಸಿಸ್​ ಬ್ಯಾಂಕ್​ ಹಾಗೂ ಬ್ಯಾಂಕ್​ ಆಫ್​ ಬರೋಡಾ ಗ್ರಾಹಕರನ್ನ ಆಕರ್ಷಿಸೋಕೆ ಇಂತಹ ಆಫರ್​ ನೀಡಿವೆ.

ಸಂಸ್ಕರಣಾ ಶುಲ್ಕದ ಮೇಲಿನ ರಿಯಾಯಿತಿ ಅಥವಾ ಮಹಿಳಾ ಖರೀದಿದಾರರಿಗೆ ವಿಶೇಷ ಪ್ರಯೋಜನಗಳಂತಹ ಕೊಡುಗೆಗಳನ್ನು ಬ್ಯಾಂಕುಗಳು ಪರಿಚಯಿಸಿವೆ. ದೇಶದ ಅತಿದೊಡ್ಡ ಬ್ಯಾಂಕ್​ಗಳಲ್ಲೊಂದಾದ ಎಸ್​ಬಿಐ 30 ಲಕ್ಷ ರೂಪಾಯಿವರೆಗಿನ ಗೃಹ ಸಾಲಕ್ಕೆ 6.90 ಶೇ. ಹಾಗೂ 30 ಲಕ್ಷ ರೂ. ಮೇಲ್ಪಟ್ಟ ಗೃಹ ಸಾಲಕ್ಕೆ ಶೇ.7 ಬಡ್ಡಿದರ ನಿಗದಿ ಮಾಡಿದೆ. 75 ಲಕ್ಷ ರೂ. ಗಿಂತ ಹೆಚ್ಚಿನ ಗೃಹ ಸಾಲ ಪಡೆಯುವವರಿಗೆ 25 ಬಿಪಿಎಸ್​ ಬಡ್ಡಿ ರಿಯಾಯಿತಿ ದರದಲ್ಲಿ ಸಿಗಲಿದೆ.

ಆದರೆ ಸಾಲಗಾರನ ಸಿಬಿಲ್​ ಸ್ಕೋರ್​ ಆಧರಸಿ ಈ ರಿಯಾಯಿತಿ ನೀಡಲಾಗುತ್ತೆ. ಮಹಿಳಾ ಸಾಲಗಾರರಿಗೆ ಇನ್ನೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಲಿದೆ.

ಹೆಚ್ಚಿನ ವಿವರಗಳಿಗೆ ಬ್ಯಾಂಕಿನ ಸ್ಥಳೀಯ ಶಾಖೆ ಅಥವಾ ಬ್ಯಾಂಕ್‌ ವೆಬ್‌ ಸೈಟ್‌ ಗೆ ಭೇಟಿ ನೀಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...