alex Certify ಟೊಮೆಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗುಡ್ ನ್ಯೂಸ್: ದರ ಇಳಿಕೆ ಬಗ್ಗೆ ಸರ್ಕಾರದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೊಮೆಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗುಡ್ ನ್ಯೂಸ್: ದರ ಇಳಿಕೆ ಬಗ್ಗೆ ಸರ್ಕಾರದ ಮಾಹಿತಿ

ನವದೆಹಲಿ: ಸೇಬಿನ ಬೆಲೆಗಿಂತಲೂ ದುಬಾರಿಯಾಗಿರುವ ಟೊಮೆಟೊ ದರ ಜನಸಾಮಾನ್ಯರನ್ನು ಕಂಗಾಲಾಗಿಸಿದೆ. ಟೊಮೆಟೊ ದರ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ನೆಮ್ಮದಿ ಸುದ್ದಿ ಸಿಕ್ಕಿದೆ.

ಡಿಸೆಂಬರ್‌ ನಲ್ಲಿ ಟೊಮೇಟೊ ದರ ಇಳಿಕೆಯಾಗಲಿದೆ ಎಂದು ಸರ್ಕಾರ ಹೇಳಿದೆ. ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಡಿಸೆಂಬರ್ ನಲ್ಲಿ ಟೊಮೆಟೊ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲಿದೆ. ಸಹಜವಾಗಿ ದರ ಕಳೆದ ವರ್ಷಕ್ಕೆ ಸಮನಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.

ಉತ್ತರ ಭಾರತದ ರಾಜ್ಯಗಳಿಂದ ಸಾಮಾನ್ಯ ತರಕಾರಿ ಪದಾರ್ಥಗಳ ಆಗಮನ ಮುಂದಿನ ತಿಂಗಳ ಆರಂಭದಿಂದ ಪ್ರಾರಂಭವಾಗುವುದರಿಂದ ಡಿಸೆಂಬರ್‌ನಲ್ಲಿ ಟೊಮೆಟೊ ಸರಾಸರಿ ಚಿಲ್ಲರೆ ಬೆಲೆ ಕುಸಿಯುತ್ತದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

ಟೊಮೆಟೊ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕಿಲೋಗ್ರಾಂಗೆ 67 ರೂ.ನಷ್ಟಿತ್ತು, ಕಳೆದ ವರ್ಷಕ್ಕಿಂತ ಶೇಕಡ 63 ರಷ್ಟು ಹೆಚ್ಚಾಗಿದೆ. ಉತ್ತರ ಭಾರತದ ರಾಜ್ಯಗಳಿಂದ ಟೊಮೆಟೊ ತಡವಾಗಿ ಆಗಮಿಸುತ್ತಿರುವುದನ್ನು ಸಚಿವಾಲಯ ಗಮನಿಸಿದೆ. ದೇಶದ ದಕ್ಷಿಣ ಭಾಗದಲ್ಲಿ ಭಾರೀ ಮಳೆಯು ಪೂರೈಕೆ ಸರಪಳಿಯನ್ನು ಅಡ್ಡಿಪಡಿಸಿದೆ. ಇದರೊಂದಿಗೆ ಬೆಳೆಗೆ ಹಾನಿಯಾಗಿರುವುದರಿಂದ ಟೊಮೆಟೊ ಸೇರಿ ವಿವಿಧ ತರಕಾರಿ ಬಲು ದುಬಾರಿಯಾಗಿದೆ. ಕೆಲವೆಡೆ 100 ರೂ.ಗಿಂತಲೂ ಅಧಿಕವಾಗಿದೆ.

ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿನ ಅಕಾಲಿಕ ಮಳೆಯಿಂದಾಗಿ ಸೆಪ್ಟೆಂಬರ್ 2021 ರ ಅಂತ್ಯದಿಂದ ಅಖಿಲ ಭಾರತ ಸರಾಸರಿ ಚಿಲ್ಲರೆ ಟೊಮೇಟೊ ಬೆಲೆ ಏರಿಕೆಯಾಗಿದೆ, ಇದು ಬೆಳೆ ಹಾನಿಗೆ ಕಾರಣವಾಗಿದೆ. ಈ ರಾಜ್ಯಗಳಿಂದ ಪೂರೈಕೆ ಸರಪಳಿಯಲ್ಲಿ ಸ್ವಲ್ಪ ಅಡೆತಡೆಗಳು ಅಥವಾ ಭಾರೀ ಮಳೆಯಿಂದಾದ ಹಾನಿಯು ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಈರುಳ್ಳಿ ಬೆಲೆ ಅಕ್ಟೋಬರ್‌ನಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಸಚಿವಾಲಯದ ಪ್ರಕಾರ, ಈರುಳ್ಳಿಯ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕಿಲೋಗ್ರಾಂಗೆ 39 ರೂ.ರಷ್ಟಿದೆ, ಇದು ಕಳೆದ ವರ್ಷಕ್ಕಿಂತ ಶೇಕಡ 32 ರಷ್ಟು ಕಡಿಮೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...