alex Certify ಟೊಮೆಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೊಮೆಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಹೆಚ್ಚಿನ ಹೊಸ ಬೆಳೆಗಳ ಪೂರೈಕೆಯೊಂದಿಗೆ ಟೊಮೆಟೊ ಚಿಲ್ಲರೆ ಬೆಲೆ ಕುಸಿಯುವ ನಿರೀಕ್ಷೆಯಿದೆ ಎಂದು ಸರ್ಕಾರ ಶುಕ್ರವಾರ ಹೇಳಿದೆ.

ಮಾನ್ಸೂನ್ ಮಳೆ ಮತ್ತು ಇತರ ಸಮಸ್ಯೆಗಳಿಂದ ಪೂರೈಕೆ ಸರಪಳಿಯು ಸ್ಥಗಿತಗೊಂಡಿದ್ದರಿಂದ ದೇಶದ ಹಲವಾರು ಭಾಗಗಳಲ್ಲಿ ಚಿಲ್ಲರೆ ಬೆಲೆಗಳು ಕಿಲೋಗ್ರಾಂಗೆ 200-250 ರೂ.ವರೆಗೂ ತಲುಪಿವೆ.

ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ಮಹಾರಾಷ್ಟ್ರದ ನಾಸಿಕ್, ನಾರ್ಯಂಗಾವ್ ಮತ್ತು ಔರಂಗಾಬಾದ್ ಪ್ರದೇಶಗಳಿಂದ, ಮಧ್ಯಪ್ರದೇಶದಿಂದ ಕೂಡ ಹೊಸ ಬೆಳೆಗಳ ಆಗಮನ ಹೆಚ್ಚಳದಿಂದ ಟೊಮೆಟೊ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದರು.

ಪ್ರಸ್ತುತ ಟೊಮೆಟೊ ಬೆಲೆಯಲ್ಲಿನ ಹೆಚ್ಚಳವು ಹೆಚ್ಚು ಟೊಮೆಟೊ ಬೆಳೆ ಬೆಳೆಯಲು ರೈತರನ್ನು ಪ್ರೇರೇಪಿಸುತ್ತದೆ, ಇದು ಮುಂಬರುವ ತಿಂಗಳುಗಳಲ್ಲಿ ಬೆಲೆಗಳನ್ನು ಸ್ಥಿರಗೊಳಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಬೆಳೆ ಋತುಮಾನ, ಕೋಲಾರ(ಕರ್ನಾಟಕ)ದಲ್ಲಿ ಬಿಳಿ ನೊಣ ರೋಗ, ದೇಶದ ಉತ್ತರ ಭಾಗದಲ್ಲಿ ಮಾನ್ಸೂನ್ ಮಳೆಯ ತ್ವರಿತ ಆಗಮನ ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಟೊಮೆಟೊ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಮತ್ತು ಲಾಜಿಸ್ಟಿಕ್ಸ್ ಅಡೆತಡೆಗಳಂತಹ ಕಾರಣ ಇತ್ತೀಚಿನ ಬೆಲೆ ಏರಿಕೆಗೆ ಕಾರಣವಾಗಿದೆ ಎಂದರು.

ಟೊಮೆಟೊ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾದ ಕಾರಣ ಜುಲೈ 10-16ರ ವಾರದಲ್ಲಿ ದೆಹಲಿ, ಪಂಜಾಬ್, ಚಂಡೀಗಢ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಟೊಮೆಟೊದ ಸರಾಸರಿ ದೈನಂದಿನ ಚಿಲ್ಲರೆ ಬೆಲೆ ಕೆಜಿಗೆ 150 ರೂಪಾಯಿ ದಾಟಿದೆ ಎಂದು ಸಚಿವರು ಮಾಹಿತಿ ನೀಡಿದರು.

ಜುಲೈ 18 ರ ಹೊತ್ತಿಗೆ, ದೆಹಲಿಯಲ್ಲಿ ಸರಾಸರಿ ಚಿಲ್ಲರೆ ಬೆಲೆ ಕೆಜಿಗೆ 130 ರೂ.ಗೆ ಮತ್ತು ಪಂಜಾಬ್‌ನಲ್ಲಿ ಕೆಜಿಗೆ 127.70 ರೂ.ಗೆ ಇಳಿಕೆಯಾಗಿದೆ. ಟೊಮೆಟೊ ಕೈಗೆಟುಕುವಂತೆ ಮಾಡಲು, ಸರ್ಕಾರವು ಬೆಲೆ ಸ್ಥಿರೀಕರಣ ನಿಧಿಯ ಅಡಿಯಲ್ಲಿ ಅವುಗಳ ಸಂಗ್ರಹವನ್ನು ಪ್ರಾರಂಭಿಸಿದೆ ಮತ್ತು ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ.

ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ(NCCF) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ(NAFED) ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ‘ಮಂಡಿ’ಗಳಿಂದ ನಿರಂತರವಾಗಿ ಟೊಮೆಟೊಗಳನ್ನು ಖರೀದಿಸುತ್ತಿದೆ. ದೆಹಲಿ-NCR, ರಾಜಸ್ಥಾನ, ಬಿಹಾರದ ಪ್ರಮುಖ ಗ್ರಾಹಕ ಕೇಂದ್ರಗಳಲ್ಲಿ ಅವುಗಳನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ..

ಟೊಮೆಟೊವನ್ನು ಚಿಲ್ಲರೆ ದರದಲ್ಲಿ 90 ರೂ.ಗೆ ವಿಲೇವಾರಿ ಮಾಡಲಾಗಿದ್ದು, ಜುಲೈ 16 ರಿಂದ ಕೆಜಿಗೆ 80 ರೂ.ಗೆ ಮತ್ತು ಜುಲೈ 20 ರಿಂದ 70 ರೂ.ಗೆ ಇಳಿಕೆಯಾಗಿದೆ. ಜುಲೈ 18 ರವರೆಗೆ ಗ್ರಾಹಕರ ಅನುಕೂಲಕ್ಕಾಗಿ ಪ್ರಮುಖ ಬಳಕೆ ಕೇಂದ್ರಗಳಲ್ಲಿ ನಿರಂತರ ಚಿಲ್ಲರೆ ವಿಲೇವಾರಿಗಾಗಿ ಒಟ್ಟು 391 ಟನ್ ಟೊಮೆಟೊ ಸಂಗ್ರಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...