alex Certify ರೈತನಿಗೆ ಖುಲಾಯಿಸಿದ ಅದೃಷ್ಟ: ದಾಖಲೆಯ ಬೆಲೆಗೆ ಮಾರಾಟವಾಯ್ತು ಟೊಮೆಟೊ: 15 ಕೆಜಿಗೆ 2200 ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತನಿಗೆ ಖುಲಾಯಿಸಿದ ಅದೃಷ್ಟ: ದಾಖಲೆಯ ಬೆಲೆಗೆ ಮಾರಾಟವಾಯ್ತು ಟೊಮೆಟೊ: 15 ಕೆಜಿಗೆ 2200 ರೂ.

ಕೋಲಾರ: ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ದಾಖಲೆಯ ಬೆಲೆಗೆ ಮಾರಾಟವಾಗಿದೆ. 15 ಕೆಜಿ ಟೊಮೆಟೊ ಬಾಕ್ಸ್ 2200 ರೂ.ಗೆ ಹರಾಜಾಗಿದೆ.

ಬೆಳೆಗಾರರಿಗೆ ಅದೃಷ್ಟ ಖುಲಾಯಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದ ವೆಂಕಟರಮಣ ಅವರು ತಂದಿದ್ದ 15 ಕೆಜಿ ಟೊಮೆಟೊ ಬಾಕ್ಸ್ ಕೋಲಾರ ಎಪಿಎಂಸಿಯಲ್ಲಿ 2200 ರೂ.ಗೆ ಹರಾಜಾಗಿದ್ದು ದಾಖಲೆ ಬರೆದಿದೆ. ವೆಂಕಟರಮಣ ಅವರು ತಂದಿದ್ದ 36 ಬಾಕ್ಸ್ ಗಳು ತಲಾ 2200 ರೂ.ಗೆ ಮಾರಾಟವಾಗಿವೆ.

ಕಳೆದ 5 ವರ್ಷಗಳಲ್ಲಿ ಇದು ದಾಖಲೆಯ ಬೆಲೆಯಾಗಿದೆ. ಕೋಲಾರ ಎಪಿಎಂಸಿ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯಾಗಿದೆ. ಒಂದು ಕೆಜಿ ಟೊಮೆಟೊ ದರ ಸರಾಸರಿ 150 ರೂ. ಇದ್ದು, ಒಂದು ಟೊಮೆಟೊ ಬೆಲೆ 15 ರೂಪಾಯಿವರೆಗೂ ಇದೆ. ಅತಿವೃಷ್ಟಿ, ಹವಾಮಾನ ವೈಪರೀತ್ಯ, ರೋಗ ಬಾಧೆ ಮೊದಲಾದ ಕಾರಣದಿಂದ ಟೊಮೆಟೊ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದ್ದು, ದರ ಏರುಗತಿಯಲ್ಲಿ ಸಾಗಿದೆ. ಬೆಳೆಗಾರರಿಗೆ ಬಂಪರ್ ಬೆಲೆ ಸಿಗುತ್ತಿದ್ದು, ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...