ನವದೆಹಲಿ: ಕಳೆದ ತಿಂಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಟೊಮೆಟೊ ದರ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.
ಸದ್ಯದಲ್ಲೇ ಟೊಮೆಟೊ ದರ 300 ರೂ. ತಲುಪುವ ಸಾಧ್ಯತೆ ಇದೆ ಎಂದು ಸಗಟು ಮಾರುಕಟ್ಟೆಯ ವ್ಯಾಪಾರಿಗಳು ಹೇಳಿದ್ದಾರೆ. ದೇಶದ ವಿವಿಧೆಡೆ ಮಳೆ ಮತ್ತಿತರ ಕಾರಣಗಳಿಂದ ಟೊಮೆಟೊ ಬೆಳೆ ಕುಂಠಿತವಾಗಿ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅನೇಕ ಭಾಗದಲ್ಲಿ ಟೊಮೆಟೊ ದರ ಗಗನಕ್ಕೇರಿದೆ.
ದೆಹಲಿಯ ಸಗಟು ಮಾರುಕಟ್ಟೆಯಲ್ಲಿ ಗುರುವಾರ ಟೊಮೆಟೊ ಕೆಜಿಗೆ 220 ರೂ.ಗೆ ಮಾರಾಟವಾಗಿದೆ. ಬುಧವಾರ ಚಿಲ್ಲರೆ ದರ ಕೆಜಿಗೆ 259 ರೂ. ಇತ್ತು. ಪೂರೈಕೆಯಲ್ಲಿ ವ್ಯತ್ಯಯದ ಕಾರಣ ಸದ್ಯದಲ್ಲೇ ಟೊಮೆಟೊ ದರ ಕೆಜಿಗೆ 300 ರೂ. ಮುಟ್ಟಲಿದೆ ಎಂದು ಮಾರುಕಟ್ಟೆ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.