alex Certify ಲಾಕ್‌ ಡೌನ್‌ ಎಫೆಕ್ಟ್: 200 ಮಿಲಿಯನ್ ಬಾರಿ ಡೌನ್ಲೋಡ್ ಆಗಿ ದಾಖಲೆ ಬರೆದ ಟಿಕ್ ಟಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್‌ ಎಫೆಕ್ಟ್: 200 ಮಿಲಿಯನ್ ಬಾರಿ ಡೌನ್ಲೋಡ್ ಆಗಿ ದಾಖಲೆ ಬರೆದ ಟಿಕ್ ಟಾಕ್

ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಟೈಂ ಪಾಸ್ ಗೆ ಜನರು ಸಾಮಾಜಿಕ ಜಾಲತಾಣಗಳ ಮೊರೆ ಹೋಗ್ತಿದ್ದಾರೆ. ಚೀನಾ ಮೂಲದ ಟಿಕ್ ಟಾಕ್ ಸದ್ಯ ಪ್ರಸಿದ್ಧಿ ಪಡೆದಿದೆ.

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ವಿಶ್ವಾದ್ಯಂತ 200 ಮಿಲಿಯನ್ ಬಾರಿ ಟಿಕ್ ಟಾಕ್ ಡೌನ್‌ಲೋಡ್‌ ಆಗಿದೆ.  ವಿಶೇಷವೆಂದರೆ ಭಾರತೀಯ ಬಳಕೆದಾರರು ಟಿಕ್ ಟಾಕ್ ಅಪ್ಲಿಕೇಶನ್ ಡೌನ್‌ ‌ಲೋಡ್ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಅಪ್ಲಿಕೇಷನನ್ನು ಭಾರತದಲ್ಲಿ 61.1 ಮಿಲಿಯನ್ ಬಾರಿ ಡೌನ್ ‌ಲೋಡ್ ಮಾಡಲಾಗಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ಡೌನ್‌ಲೋಡ್‌ ಆದ ಒಟ್ಟು ಅಪ್ಲಿಕೇಶನ್‌ ಗಳಲ್ಲಿ ಶೇಕಡಾ 30.3 ರಷ್ಟು ಪಾಲು ಟಿಕ್ ಟಾಕ್ ನದ್ದಿದೆ.

ಭಾರತದ ನಂತರ ಟಿಕ್‌ಟಾಕ್ ಡೌನ್‌ಲೋಡ್ ಮಾಡುವಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ಇದನ್ನು ಚೀನಾದಲ್ಲಿ 19.6 ಮಿಲಿಯನ್ ಬಾರಿ  ಡೌನ್‌ಲೋಡ್ ಮಾಡಲಾಗಿದೆ. ಟಿಕ್‌ಟಾಕ್ ಡೌನ್‌ಲೋಡ್ ಮಾಡುವಲ್ಲಿ ಅಮೆರಿಕ ಮೂರನೇ ಸ್ಥಾನದಲ್ಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...