alex Certify ಅಗ್ಗದ ಬೆಲೆಗೆ ಸಿಗ್ತಿದೆ ಈ ಐದು ಕಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ಗದ ಬೆಲೆಗೆ ಸಿಗ್ತಿದೆ ಈ ಐದು ಕಾರ್

ಕೊರೊನಾ ಸಂದರ್ಭದಲ್ಲಿ ಸುರಕ್ಷಿತ ಪ್ರಯಾಣದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗ್ತಿದೆ. ಇದೇ ಕಾರಣಕ್ಕೆ ಜನರು ಸಾರ್ವಜನಿಕ ಸಾರಿಗೆ ಬದಲು ವೈಯಕ್ತಿಕ ವಾಹನದಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಬಜೆಟ್ ಕಾರುಗಳ ಬೇಡಿಕೆ ಹೆಚ್ಚಾಗಿದೆ. 5 ಲಕ್ಷ ರೂಪಾಯಿ ಮೌಲ್ಯದ 4 ಕಾರುಗಳ ವಿವರ ಇಲ್ಲಿದೆ.

ಹೊಸ ಹ್ಯುಂಡೈ ಸ್ಯಾಂಟ್ರೊ – ಹೊಸ ಹ್ಯುಂಡೈ ಸ್ಯಾಂಟ್ರೊವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಹೊಸ ಕಾರು, ಮೊದಲಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ದೆಹಲಿ ಎಕ್ಸ್ ಶೋ ರೂಂನಲ್ಲಿ ಹೊಸ ಸ್ಯಾಂಟ್ರೊದ ಬೆಲೆ 4.19 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ.

ಟಾಟಾ ಟಿಯಾಗೊ – ಟಾಟಾ ಟಿಯಾಗೊ ಕೂಡ ಆಕರ್ಷಕ ಬೆಲೆಗೆ ಗ್ರಾಹಕರಿಗೆ ಸಿಗ್ತಿದೆ. ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟ್ಯಗಳನ್ನು ಇದ್ರಲ್ಲಿ ನೀಡಲಾಗಿದೆ. ಟಿಯಾಗೊದ ಹೊಸ ವಿಭಾಗದಲ್ಲಿ ಕಂಪನಿಯು ಡ್ರೈವಿಂಗ್ ಮೋಡ್, ರಿವರ್ಸ್ ಪಾರ್ಕಿಂಗ್ ಸೆನ್ಸರ್, ಕೂಲ್ ಗ್ಲೋವ್ಸ್ ಬಾಕ್ಸ್ ಮತ್ತು 8 ಸ್ಪೀಕರ್ ಹರ್ಮನ್ ಆಡಿಯೊ ಸಿಸ್ಟಮ್ ನೀಡಿದೆ. ಈ ಕಾರು ದೆಹಲಿ ಎಕ್ಸ್ ಶೋ ರೂಂನಲ್ಲಿ 4 ಲಕ್ಷ 45 ಸಾವಿರ ರೂಪಾಯಿಗೆ ಸಿಗ್ತಿದೆ.

ರೆನಾಲ್ಟ್ ಕ್ವಿಡ್ – ಸೀಮಿತ ಬಜೆಟ್ ಕಾರು ಖರೀದಿದಾರರ ಮೊದಲ ಆಯ್ಕೆ ಇದಾಗಿದೆ. ದೆಹಲಿ ಎಕ್ಸ್ ಶೋ ರೂಮಿನಲ್ಲಿ ಈ ಕಾರಿನ ಆರಂಭಿಕ ಬೆಲೆ 2 ಲಕ್ಷ 75 ಸಾವಿರ ರೂಪಾಯಿ. ಕಂಪನಿ ಆಕರ್ಷಕ ವಿನ್ಯಾಸದೊಂದಿಗೆ ಕಾರನ್ನು ಗ್ರಾಹಕರಿಗೆ ನೀಡ್ತಿದೆ.

ಮಾರುತಿ ಸುಜುಕಿ ವ್ಯಾಗನಾರ್ – ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿಯ, ವ್ಯಾಗನಾರ್ ಅತ್ಯಂತ ಜನಪ್ರಿಯ ಕಾರು. ಮಾರುತಿ ಮುಂದಿನ ದಿನಗಳಲ್ಲಿ ವ್ಯಾಗನಾರ್ ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡುವ ಪ್ಲಾನ್ ನಲ್ಲಿದೆ. ದೆಹಲಿ ಎಕ್ಸ್ ಶೋ ರೂಂನಲ್ಲಿ ಈ ಕಾರಿನ ಆರಂಭಿಕ ಬೆಲೆ 4 ಲಕ್ಷ 30 ಸಾವಿರ ರೂಪಾಯಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...