alex Certify ʼವಾಟ್ಸಾಪ್ʼ‌ ತೊರೆದು ʼಟೆಲಿಗ್ರಾಂʼ ಸೇರುತ್ತಿದ್ದಾರೆ ಕೋಟ್ಯಾಂತರ ಬಳಕೆದಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಟ್ಸಾಪ್ʼ‌ ತೊರೆದು ʼಟೆಲಿಗ್ರಾಂʼ ಸೇರುತ್ತಿದ್ದಾರೆ ಕೋಟ್ಯಾಂತರ ಬಳಕೆದಾರರು

ವಾಟ್ಸಾಪ್​ನ ಹೊಸ ಷರತ್ತು ಹಾಗೂ ನಿಯಮದ ಬಳಿಕ ಅನೇಕರು ಬೇರೆ ಮೆಸೇಜಿಂಗ್​ ಅಪ್ಲಿಕೇಶನ್​​ಗಳತ್ತ ಮುಖ ಮಾಡಿದ್ದಾರೆ. ಈಗಾಗಲೇ ಟೆಲಿಗ್ರಾಂ ಹಾಗೂ ಸಿಗ್ನಲ್​ ಅಪ್ಲಿಕೇಶನ್​ಗಳು ದಿನದಿಂದ ದಿನಕ್ಕೆ ಮಿಲಿಯನ್​ಗಟ್ಟಲೇ ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ.

ಎನ್​ಕ್ರಿಪ್ಟ್​ ಮಾಡಲಾದ ಮೆಸೆಜಿಂಗ್​ ಆಯ್ಕೆಯನ್ನ ಹೊಂದಿರುವ ಟೆಲಿಗ್ರಾಂ ಕಳೆದ 72 ಗಂಟೆಗಳಲ್ಲಿ 25 ಮಿಲಿಯನ್​ ಹೊಸ ಬಳಕೆದಾರರನ್ನ ನೋಂದಾಯಿಸಿದೆ ಎಂದು ರಷ್ಯಾ ಮೂಲದ ಸಂಸ್ಥಾಪಕ ಪಾವೆಲ್​ ಡುರೆವ್​​ ಮಂಗಳವಾರ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ 36 ವರ್ಷದ ಡುರೆವ್,​ ಟೆಲಿಗ್ರಾಂ ಈ ವರ್ಷದ ಮೊದಲ ವಾರದಲ್ಲಿ 500 ಮಿಲಿಯನ್​ಗಿಂತಲೂ ಹೆಚ್ಚು ಬಳಕೆದಾರರನ್ನ ಹೊಂದಿತ್ತು. ಆದರೆ ಕಳೆದ 72 ಗಂಟೆಗಳಲ್ಲಿ 25 ಮಿಲಿಯನ್​ ಹೊಸ ಬಳಕೆದಾರರು ಟೆಲಿಗ್ರಾಂಗೆ ಸೇರಿಕೊಂಡಿದ್ದಾರೆ ಎಂದು ಹೇಳಿದ್ರು.

ಎರಡು ಶತಕೋಟಿ ಬಳಕೆದಾರರನ್ನ ಹೊಂದಿದ್ದ ವಾಟ್ಸಾಪ್​ ತನ್ನ ಷರತ್ತು ಹಾಗೂ ನಿಯಮಗಳಲ್ಲಿ ವಿವಾದಾತ್ಮಕ ಬದಲಾವಣೆಗಳನ್ನ ಮಾಡಿದ ಬಳಿಕ ಉಳಿದ ಮೆಸೇಜಿಂಗ್​ ಅಪ್ಲಿಕೇಶನ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ವಾಟ್ಸಾಪ್​ ತನ್ನ ಹೊಸ ಷರತ್ತಿನ ಪ್ರಕಾರ ಫೇಸ್​ಬುಕ್​ಗೆ ಬಳಕೆದಾರರ ಮಾಹಿತಿಯನ್ನ ನೀಡೋದಾಗಿ ಹೇಳಿತ್ತು. ಆದರೆ ಈ ಬಗ್ಗೆ ಗೊಂದಲಗಳು ಹೆಚ್ಚಾದ ಬಳಿಕ ವಾಟ್ಸಾಪ್​ ಟ್ವಿಟರ್​ ಖಾತೆಯಲ್ಲಿ ಷರತ್ತು ಹಾಗೂ ನಿಯಮದ ಬಗ್ಗೆ ಸ್ಪಷ್ಟನೆಯನ್ನೂ ನೀಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...