alex Certify ಗೇಮ್‌ ಆಡಲು ಶಾಲೆ ತೊರೆದ ಹುಡುಗನಿಗೆ ಅಪ್ಪನಿಂದಲೇ ಸಪೋರ್ಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಮ್‌ ಆಡಲು ಶಾಲೆ ತೊರೆದ ಹುಡುಗನಿಗೆ ಅಪ್ಪನಿಂದಲೇ ಸಪೋರ್ಟ್…!

ಗೇಮಿಂಗ್ ಜಗತ್ತೇ ಅಂಥದ್ದು ನೋಡಿ. ಆನ್ಲೈನ್‌ ಗೇಮಿಂಗ್‌ಗೆ ಅಡಿಕ್ಟ್‌ ಆದವರು ಮಾಡುವ ಕೆಲಸವನ್ನೆಲ್ಲಾ ಬಿಟ್ಟು, ಆಡುತ್ತಲೇ ಕೂತುಬಿಡುತ್ತಾರೆ. ಆದರೆ ಇದನ್ನೇ ಪ್ರೊಫೆಶನಲ್ ಆಗಿ ಆಡುವವರು, ಗೇಮ್ ಆಡುತ್ತಲೇ ಹಣ ಗಳಿಸುವ ಮಟ್ಟಕ್ಕೂ ಏರಿದ ದೃಷ್ಟಾಂತಗಳು ಸಾಕಷ್ಟಿವೆ.

ಗೋಲ್ಡ್ ಕೋಸ್ಟ್‌ನ ಅಲೆಕ್ಸ್‌ ಮ್ಯಾಕೆಚೈನ್ ಹೆಸರಿನ 17 ವರ್ಷದ ಹುಡುಗನೊಬ್ಬ ವೃತ್ತಿಪರ ಫೋರ್ಟ್‌ನೈಟ್ ಆಟಗಾರನಾಗಲು ಶಾಲೆಯನ್ನೇ ತೊರೆದಿದ್ದಾನೆ. ಆತನ ಈ ನಿರ್ಧಾರಕ್ಕೆ ತಂದೆಯ ಸಹಕಾರವೂ ಸಿಕ್ಕಿದೆ. ಈ ಫೋರ್ಟ್‌ನೈಟ್ ಆಟದ ಮೇಲೆ ಪರಿಣಿತಿ ಸಾಧಿಸಿರುವ ಅಲೆಕ್ಸ್‌ ಇದೀಗ ಇದನ್ನೇ ವೃತ್ತಿಪರವಾಗಿ ಆಡುವ ಆಶಯ ತೋರಿದ್ದಾನೆ.

ಟ್ವಿಚ್ ‌ನಲ್ಲಿ 22,000 ಹಿಂಬಾಲಕರನ್ನು ಹೊಂದಿರುವ ಅಲೆಕ್ಸ್‌ ಕಳೆದ 18 ತಿಂಗಳುಗಳಿಂದ ಅನೇಕ ಆನ್ಲೈನ್ ಕೂಟಗಳಲ್ಲಿ ಭಾಗಿಯಾಗಿ $42,000 ಸಂಪಾದನೆ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರನ್ನು ಹೊಂದಿರುವ ಗೇಮರ್ ‌ಗಳು ಮಿಲಿಯನ್‌ಗಳ ಲೆಕ್ಕದಲ್ಲಿ ಡಾಲರ್‌ಗಳನ್ನು ಸಂಪಾದಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...