alex Certify ಸ್ಪೂರ್ತಿದಾಯಕವಾಗಿದೆ ಈ ಸಾಫ್ಟ್ ವೇರ್ ಇಂಜಿನಿಯರ್ ದಂಪತಿಯ ಯಶಸ್ಸಿನ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೂರ್ತಿದಾಯಕವಾಗಿದೆ ಈ ಸಾಫ್ಟ್ ವೇರ್ ಇಂಜಿನಿಯರ್ ದಂಪತಿಯ ಯಶಸ್ಸಿನ ಕಥೆ

Techie Couple from Hyderabad Quits Jobs in New Zealand and is Now Growing Vegetables in AI Farm

ಹೈದ್ರಾಬಾದ್: ನ್ಯೂಜಿಲೆಂಡ್ ನಲ್ಲಿ 18 ವರ್ಷ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ದುಡಿದ ಭಾರತ ಮೂಲದ ದಂಪತಿ ಹೈದ್ರಾಬಾದ್ ಹಾಗೂ ತೆಲಂಗಾಣದಲ್ಲಿ 160 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ತರಕಾರಿ ಬೆಳೆದು ಈಗ ಸ್ವದೇಶದಲ್ಲಿ ಯಶಸ್ವಿ ರೈತರಾಗಿದ್ದಾರೆ.

ಸಚಿನ್ ಡಾಬರ್ವಾರ್ ಹಾಗೂ ಶ್ವೇತಾ ದಂಪತಿ ಎಂ.ಎನ್.ಸಿ. ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ದುಡಿದಿದ್ದರು. ಆದರೆ, ಆ ಕೆಲಸದಲ್ಲಿ ಸಮಾಧಾನ ಇರಲಿಲ್ಲ. ಇದರಿಂದ 2013 ರಲ್ಲಿ ಊರಿಗೆ ಬಂದು ಹೈದ್ರಾಬಾದ್ ನ ಶಮೀರ್ ಪೇಟ್ ಎಂಬಲ್ಲಿ 10 ಎಕರೆಯಲ್ಲಿ 150 ಬಗೆಯ ತರಕಾರಿ ಬೆಳೆಯಲಾರಂಭಿಸಿದರು. ಸ್ಥಳೀಯ ಸೂಪರ್ ಮಾರ್ಕೆಟ್ ಗಳಿಗೆ ಸಿಂಪ್ಲಿ ಫ್ರೆಶ್ ಎಂಬ ತಮ್ಮದೇ ಬ್ರ್ಯಾಂಡ್ ನಲ್ಲಿ ಮಾರಾಟ ಪ್ರಾರಂಭಿಸಿದರು.

ಗಂಡು ಮಗುವಿಗೆ 6 ಲಕ್ಷ, ಹೆಣ್ಣು ಮಗುವಿಗೆ 4 ಲಕ್ಷ ರೂ.ಗೆ ಮಾರಾಟ: ದಂಧೆಯಲ್ಲಿ ವೈದ್ಯನೂ ಭಾಗಿ..?

“ನಮ್ಮ ವ್ಯವಹಾರ ಉತ್ತಮವಾಗುತ್ತಿದ್ದಂತೆ ತೆಲಂಗಾಣದ ಅರ್ಜುನ್ ಪತ್ಲಾ ಸಮೀಪದ ಸಿದ್ದಿಪೇಟ್ ನಲ್ಲಿ 150 ಎಕರೆ ಜಮೀನು ಪಡೆದು ತರಕಾರಿ ಬೆಳೆ ಮಾಡಲಾರಂಭಿಸಿದೆವು. ಪ್ರಾರಂಭದಲ್ಲಿ‌ ನಾವು ದಿನಕ್ಕೆ 8 ಸಾವಿರ ಕೆಜಿ ತರಕಾರಿ ನೀಡುತ್ತಿದ್ದೆವು. ಈಗ ಎರಡು ಮಿಲಿಯನ್‌ ಕೆಜಿಗೆ ಹೆಚ್ಚಿಸಿದ್ದೇವೆ” ಎನ್ನುತ್ತಾರೆ ಸಚಿನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...