alex Certify ಗಂಡು ಮಗುವಿಗೆ 6 ಲಕ್ಷ, ಹೆಣ್ಣು ಮಗುವಿಗೆ 4 ಲಕ್ಷ ರೂ.ಗೆ ಮಾರಾಟ: ದಂಧೆಯಲ್ಲಿ ವೈದ್ಯನೂ ಭಾಗಿ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡು ಮಗುವಿಗೆ 6 ಲಕ್ಷ, ಹೆಣ್ಣು ಮಗುವಿಗೆ 4 ಲಕ್ಷ ರೂ.ಗೆ ಮಾರಾಟ: ದಂಧೆಯಲ್ಲಿ ವೈದ್ಯನೂ ಭಾಗಿ..?

ಮಂಗಳೂರು: ಮಗು ಮಾರಾಟ ಜಾಲ ಭೇದಿಸಿರುವ ಮಂಗಳೂರು ಪೊಲೀಸರು 5 ತಿಂಗಳ ಹೆಣ್ಣು ಮಗುವನ್ನು ರಕ್ಷಿಸಿದ್ದಾರೆ.

ಮೂಲ್ಕಿಯ ರೆಹಾನ್ ಬಂಧಿತ ಆರೋಪಿ. ಮಗುವನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಹಾಸನದ ವೈದ್ಯರೊಬ್ಬರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ರೆಹಾನ್ ಗಂಡು ಮಗುವಿಗೆ 6 ಲಕ್ಷ ರೂಪಾಯಿ, ಹೆಣ್ಣು ಮಗುವಿಗೆ 4 ಲಕ್ಷ ರೂಪಾಯಿ ಪಡೆದುಕೊಂಡು ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆ ಸಂಪರ್ಕಿಸಿ ಮಗು ಮಾರಾಟ ಮಾಡುವುದಾಗಿ ಮಂಗಳೂರಿನ ವ್ಯಕ್ತಿ ಹೇಳಿದ್ದು, ಒಡನಾಡಿ ಸಂಸ್ಥೆಯ ಸಿದ್ದಾರ್ಥ ಮತ್ತು ದೀಕ್ಷಿತ್ ಅವರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಸನದ ದಂಪತಿಯಿಂದ ಹೆಣ್ಣು ಮಗುವನ್ನು ಮೂರು ಲಕ್ಷ ರೂಪಾಯಿಗೆ ಪಡೆದು ಕಾರ್ಕಳದ ಮಹಿಳೆಗೆ 6 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದು, ಮಗುವನ್ನು ರಕ್ಷಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...