alex Certify ಟಾಟಾ ಮೋಟಾರ್ಸ್ ಉತ್ಪಾದಿಸಿರುವ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಟಾ ಮೋಟಾರ್ಸ್ ಉತ್ಪಾದಿಸಿರುವ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ…?

ಪ್ರಯಾಣಿಕ ವಾಹನ ಕ್ಷೇತ್ರದಲ್ಲಿ ದಿಗ್ಗಜನಾಗಿ ಬೆಳೆದಿರುವ ಟಾಟಾ ಮೋಟರ್ಸ್ ಇದುವರೆಗೂ 40 ಲಕ್ಷ ವಾಹನಗಳನ್ನು ಉತ್ಪಾದಿಸಿದೆ ಎಂದು ಖುದ್ದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

1991ರಲ್ಲಿ ಟಾಟಾ ಸಿಯೆರಾ SUV ಮೂಲಕ ಪ್ರಯಾಣಿಕ ವಾಹನ ಕ್ಷೇತ್ರಕ್ಕೆ ಕಾಲಿಟ್ಟ ಟಾಟಾ, ಇದುವರೆಗೂ ಸುಮೋ, ಇಂಡಿಕಾ, ಸಫಾರಿ, ನ್ಯಾನೋ ಸೇರಿದಂತೆ ಅನೇಕ ಹೆಸರಾಂತ ಮಾಡೆಲ್ ‌ನ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ.

2005-06ರಲ್ಲಿ ಹತ್ತು ಲಕ್ಷ ಘಟಕಗಳ ಉತ್ಪಾದನೆಯ ದಾಖಲೆ ಮಾಡಿದ ಟಾಟಾ, 2015ರಲ್ಲಿ 30 ಲಕ್ಷ ವಾಹನಗಳನ್ನು ಉತ್ಪಾದಿಸಿತ್ತು. ಇದೀಗ ಕಳೆದ 5 ವರ್ಷಗಳ ಅವಧಿಯಲ್ಲಿ 10 ಲಕ್ಷ ಹೆಚ್ಚುವರಿ ವಾಹನಗಳನ್ನು ಉತ್ಪಾದನೆ ಮಾಡಿದೆ ಟಾಟಾ.

ದೇಶದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯ 67% ಪಾಲನ್ನು ಹೊಂದಿರುವ ಟಾಟಾ, ಮುಂದಿನ ದಿನಗಳಲ್ಲಿ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಾದ ಆಲ್ಟ್ರೋಝ್‌ನ ಎಲೆಕ್ಟ್ರಿಕ್ ಅವತರಣಿಕೆಯನ್ನು ಪರಿಚಯಿಸಲು ಮುಂದಡಿ ಇಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...