alex Certify ಸತತ ಎರಡನೇ ದಿನವೂ ಇಳಿಕೆ ಕಂಡ ಬಂಗಾರದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ ಎರಡನೇ ದಿನವೂ ಇಳಿಕೆ ಕಂಡ ಬಂಗಾರದ ಬೆಲೆ

ಚಿನ್ನ-ಬೆಳ್ಳಿ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಸತತ ಎರಡನೇ ದಿನ ಬಂಗಾರ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 649 ರೂಪಾಯಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ 1530 ರೂಪಾಯಿ ಇಳಿಕೆ ಕಂಡಿದೆ.

22 ಕ್ಯಾರೆಟ್ ಚಿನ್ನದ ಬೆಲೆ 595 ರೂಪಾಯಿ ಇಳಿಕೆ ಕಂಡು 10 ಗ್ರಾಂಗೆ 46726 ರೂಪಾಯಿಯಾಗಿದೆ. ದೆಹಲಿ ಬುಲಿಯನ್ ಮಾರುಕಟ್ಟೆ ಹಾಗೂ ಜ್ಯುವೆಲರಿ ಅಸೋಸಿಯೇಷನ್ ಬಿಡುಗಡೆ ಮಾಡುವ ದರಗಳಲ್ಲಿ 500ರಿಂದ 1000 ರೂಪಾಯಿ ವ್ಯತ್ಯಾಸವಿರುತ್ತದೆ. ಜ್ಯುವೆಲರಿ ಅಸೋಸಿಯೇಷನ್ ವೆಬ್ ಸೈಟ್ ಪ್ರಕಾರ 24 ಕ್ಯಾರೆಟ್ ಚಿನ್ನದ ಬೆಲೆ ಗುರುವಾರ 10 ಗ್ರಾಂಗೆ 51011 ರೂಪಾಯಿಯಾಗಿದೆ. ಬುಧವಾರ 24 ಕ್ಯಾರೆಟ್ ಚಿನ್ನದ ಬೆಲೆ 51660 ರೂಪಾಯಿಯಿತ್ತು.

ಇನ್ನು 1530 ರೂಪಾಯಿ ಇಳಿಕೆ ನಂತ್ರ ಬೆಳ್ಳಿ ಬೆಲೆ ಕೆ.ಜಿಗೆ 68698 ರೂಪಾಯಿಯಾಗಿದೆ. ಇನ್ನು ನಿನ್ನೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 27.19 ಡಾಲರ್ ಪ್ರತಿ ಔನ್ಸ್ ಆಗಿತ್ತು. ಬೆಳ್ಳಿ ಬೆಲೆ 27.07 ಡಾಲರ್ ಪ್ರತಿ ಔನ್ಸ್ ಆಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...