alex Certify 1.8 ಲಕ್ಷ ರೂ. ಹೂಡಿಕೆಯಲ್ಲಿ ಶುರುಮಾಡಿ ಲಾಭಕರ ಬ್ಯುಸಿನೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1.8 ಲಕ್ಷ ರೂ. ಹೂಡಿಕೆಯಲ್ಲಿ ಶುರುಮಾಡಿ ಲಾಭಕರ ಬ್ಯುಸಿನೆಸ್

ಕೊರೊನಾ ನಂತ್ರ ಜನರು ನೌಕರಿಗಿಂತ ಬ್ಯುಸಿನೆಸ್ ಗೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಉತ್ತಮ ಲಾಭ ನೀಡಬಲ್ಲ ವ್ಯಾಪಾರಕ್ಕಿಳಿಯಲು ಮುಂದಾಗ್ತಿದ್ದಾರೆ. ನೀವೂ ವ್ಯಾಪಾರ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ಟ್ರೌಟ್ ಮೀನು ಸಾಕಣೆ ಶುರು ಮಾಡಬಹುದು. ಹಕ್ಕಿ ಜ್ವರದ ಸಂದರ್ಭದಲ್ಲಿ ಮೀನಿಗೆ ಬೇಡಿಕೆ ಹೆಚ್ಚಾಗಿದೆ. ಮೀನು ಆರೋಗ್ಯಕ್ಕೂ ಒಳ್ಳೆಯದು. ಮೀನು ಸಾಕಣೆಗೆ ನಬಾರ್ಡ್ ನಿಂದಲೂ ಹಣಕಾಸಿನ ನೆರವು ಸಿಗ್ತಿದೆ.

ಕಡಿಮೆ ಹೂಡಿಕೆಯಲ್ಲಿ ಉದ್ಯಮ ಸ್ಥಾಪಿಸಿ‌ ಹಣ ಗಳಿಸಲು ಇಲ್ಲಿದೆ ಅವಕಾಶ

ಟ್ರೌಟ್ ಮೀನು ಕೃಷಿಯನ್ನು 2.3 ಲಕ್ಷ ರೂಪಾಯಿಯೊಳಗೆ ಶುರು ಮಾಡಬಹುದು. ನಿಮಗೆ ಸಬ್ಸಿಡಿ ಸಿಕ್ಕಿದ್ರೆ 1.8 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ಸಾಕು. ದೇಶಿಯ ಮೀನುಗಾರಿಕೆಯಲ್ಲಿ ಐದು ಪಟ್ಟು ಲಾಭವಿದೆ. ನಬಾರ್ಡ್ ವರದಿಯ ಪ್ರಕಾರ, ಟ್ರೌಟ್ ಒಂದು ರೀತಿಯ ಮೀನು. ಇದು ಸ್ಪಷ್ಟ ನೀರಿನಲ್ಲಿ ಕಂಡುಬರುತ್ತದೆ. ಭಾರತದ ಕೆಲವು ರಾಜ್ಯಗಳಲ್ಲಿ ಈ ಮೀನು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ತಮಿಳುನಾಡು, ಕೇರಳದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ರಾಜ್ಯಗಳಲ್ಲಿ ಟ್ರೌಟ್ ಉತ್ಪಾದನೆಗೆ ಮೂಲಸೌಕರ್ಯ ಲಭ್ಯವಿದೆ. ಟ್ರೌಟ್ ಮೀನು ಸಾಕಣೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರಗಳು ಹಲವಾರು ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಸಹ ನಡೆಸುತ್ತಿವೆ.

ಮಕ್ಕಳಿಗೆ ಹೇಳಿ ಕೊಡಿ ಉಳಿತಾಯದ ಪಾಠ

ನಬಾರ್ಡ್ ವರದಿಯ ಪ್ರಕಾರ, 15X2X1.5 ಮೀಟರ್ ರೇಸ್ವೆ ನಿರ್ಮಿಸಲು ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ವಸ್ತುಗಳ ಖರೀದಿಗೆ ಸುಮಾರು 6 ಸಾವಿರ ರೂಪಾಯಿ ಬೇಕು. ಇದರಲ್ಲಿ ಹ್ಯಾಂಡ್ ನೆಟ್, ಬಕೆಟ್, ಟಬ್, ಥರ್ಮೋಕಾಲ್ ಸೇರಿವೆ. ಬೀಜಕ್ಕಾಗಿ 22,500 ರೂಪಾಯಿ ಮತ್ತು 1.45 ಲಕ್ಷ ರೂಪಾಯಿವರೆಗೆ ಆಹಾರಕ್ಕಾಗಿ ಖರ್ಚು ಮಾಡಬೇಕಾಗುತ್ತದೆ. ಇದಕ್ಕೆ ನೀವು ಸಾಲ ತೆಗೆದುಕೊಂಡ್ರೆ ಮೊದಲ ವರ್ಷದ ಬಡ್ಡಿ 26,700 ರೂಪಾಯಿಯಾಗುತ್ತದೆ. ಮೊದಲ ವರ್ಷದಲ್ಲಿ ಒಟ್ಟು 3 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಅದರ ಮೇಲೆ ಶೇಕಡಾ 20 ಪ್ರತಿಶತ ಅಂದರೆ ಸುಮಾರು 60 ಸಾವಿರ ರೂಪಾಯಿ ಸಬ್ಸಿಡಿ ಸಿಗುತ್ತದೆ. ಎಸ್‌ಸಿ ಅಥವಾ ಎಸ್‌ಟಿ ವರ್ಗದವರಾಗಿದ್ದರೆ ಶೇಕಡಾ 25 ರಷ್ಟು ಸಹಾಯಧನ ಸಿಗುತ್ತದೆ.

ಈ ಬ್ಯುಸಿನೆಸ್ ಶುರು ಮಾಡಿ ಕೈ ತುಂಬ ಹಣ ಗಳಿಸಿ

ಮೊದಲ ವರ್ಷದ ವಹಿವಾಟು ಸುಮಾರು 3.23 ಲಕ್ಷ ರೂಪಾಯಿಗಳಾಗಿರುತ್ತದೆ. ಮುಂದಿನ ವರ್ಷಗಳಲ್ಲಿ ನಿಮ್ಮ ಬಂಡವಾಳ ವೆಚ್ಚವು ಕಡಿಮೆಯಾಗುತ್ತದೆ ಮತ್ತು ವಹಿವಾಟು 3.50 ಲಕ್ಷ ರೂಪಾಯಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...