alex Certify ಖುಷಿಯಲ್ಲಿದ್ದ ಕುಡುಕರ ಕಿಕ್ ಇಳಿಸಿದ ಸರ್ಕಾರ: ಮದ್ಯದ ಮೇಲೆ ಬರೋಬ್ಬರಿ ಶೇಕಡ 70 ರಷ್ಟು ಕೊರೋನಾ ‘ತೆರಿಗೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿಯಲ್ಲಿದ್ದ ಕುಡುಕರ ಕಿಕ್ ಇಳಿಸಿದ ಸರ್ಕಾರ: ಮದ್ಯದ ಮೇಲೆ ಬರೋಬ್ಬರಿ ಶೇಕಡ 70 ರಷ್ಟು ಕೊರೋನಾ ‘ತೆರಿಗೆ’

ನವದೆಹಲಿ: ಮೇ 4ರಿಂದ ಮೂರನೇ ಹಂತದ ಲಾಕ್ ಡೌನ್ ಮುಂದುವರೆದಿದ್ದು ನಿರ್ಬಂಧಗಳಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದೆ. ದೇಶದ ಹಲವೆಡೆ ಮದ್ಯ ಮಾರಾಟ ಆರಂಭವಾಗಿದ್ದು, ಮದ್ಯ ಪ್ರಿಯರು ಬಹು ದಿನಗಳ ಬಳಿಕ ರುಚಿ ನೋಡಿದ್ದಾರೆ.

ದೆಹಲಿಯಲ್ಲಿ ಮದ್ಯದ ಮೇಲೆ ಶೇಕಡ 70ರಷ್ಟು ವಿಶೇಷ ಸುಂಕ ವಿಧಿಸಲಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮದ್ಯದ ಮೇಲೆ ಶೇ. 70 ರಷ್ಟು ವಿಶೇಷ ಕೊರೋನಾ ಶುಲ್ಕ ವಿಧಿಸಿದ್ದು ಪರಿಷ್ಕೃತ ದರ ಮೇ 5 ರಿಂದಲೇ ಜಾರಿಗೆ ಬರಲಿದೆ.

ಮದ್ಯದ ಗರಿಷ್ಠ ಮಾರಾಟದ ಬೆಲೆಯ ಮೇಲೆ ಶೇಕಡ 70 ರಷ್ಟು ವಿಶೇಷ ಕೊರೋನಾ ಸುಂಕ ವಿಧಿಸಲಾಗಿದ್ದು ಮದ್ಯದ ಬೆಲೆ ದುಬಾರಿಯಾಗಿದೆ. ಬಹುದಿನಗಳ ಬಳಿಕ ಮದ್ಯದ ರುಚಿ ನೋಡಬಹುದು ಎಂದುಕೊಂಡಿದ್ದ ಮದ್ಯ ಪ್ರಿಯರಿಗೆ ದೆಹಲಿ ಸರ್ಕಾರದ ಈ ನಿರ್ಧಾರ ಶಾಕ್ ನೀಡಿದೆ. ಕೊರೋನಾ ವಿಶೇಷ ಸುಂಕದಿಂದ ಸರ್ಕಾರಕ್ಕೆ ಆದಾಯ ಹೆಚ್ಚಳವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...