alex Certify ಕುಖ್ಯಾತರ ಲಿಸ್ಟ್​​​​ನಲ್ಲಿ ಸ್ನಾಪ್​ ಡೀಲ್​..! ಸ್ಪಷ್ಟನೆ ನೀಡಿದ ಆನ್​ಲೈನ್​ ಮಾರುಕಟ್ಟೆ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಖ್ಯಾತರ ಲಿಸ್ಟ್​​​​ನಲ್ಲಿ ಸ್ನಾಪ್​ ಡೀಲ್​..! ಸ್ಪಷ್ಟನೆ ನೀಡಿದ ಆನ್​ಲೈನ್​ ಮಾರುಕಟ್ಟೆ ಕಂಪನಿ

ಭಾರತದ ಅತಿ ದೊಡ್ಡ ಇ ಕಾಮರ್ಸ್​ ವೇದಿಕೆಗಳಲ್ಲಿ ಒಂದಾದ ಸ್ನ್ಯಾಪ್​ಡೀಲ್​ ಅಮೆರಿಕ ರಿಪ್ರೆಸೆಂಟೇಟಿವ್​ ಮಾಡಿರುವ ಆರೋಪವನ್ನ ತಳ್ಳಿ ಹಾಕಿದೆ. ಯುಎಸ್​ ಟ್ರೇಡ್​ ರೆಪ್ರೆಸೆಂಟಿವ್​ ಸ್ನಾಪ್​ಡೀಲ್​ ಕಂಪನಿಯನ್ನ ವಂಚಕ ಮಾರುಕಟ್ಟೆಯ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.

ಯುಎಸ್​ಟಿಆರ್​ ಕಚೇರಿ ಹೊರಡಿಸಿದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯ ಪೈಕಿ ಸ್ನಾಪ್​​ಡೀಲ್​ ಸೇರಿದಂತೆ ಭಾರತದ ನಾಲ್ಕು ಶಾಪಿಂಗ್ ಸಂಕೀರ್ಣಗಳು ಸೇರಿವೆ.ಸ್ನ್ಯಾಪ್​ಡೀಲ್​ ಸೇರಿದಂತೆ ಹಲವು ಮಾರುಕಟ್ಟೆಗಳನ್ನ ಈ ವಂಚಕರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಆದರೆ ಈ ಆರೋಪವನ್ನ ತಳ್ಳಿ ಹಾಕಿರುವ ಸ್ನಾಪ್​ಡೀಲ್​ ವಕ್ತಾರ ಇದು ತಪ್ಪು ತಿಳುವಳಿಕೆಯ ಆಧಾರದ ಮೇಲೆ ಮಾಡಿರುವ ವರದಿಯಾಗಿದೆ ಎಂದು ಹೇಳಿದ್ದಾರೆ. ಯುಎಸ್​ಟಿಆರ್​ ಈ ವರದಿಯನ್ನ ಉದ್ದೇಶಪೂರ್ವಕವಾಗಿ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ನಮ್ಮ ವರ್ಚಸ್ಸನ್ನ ಹಾಳು ಮಾಡಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಸ್ನಾಪ್​ಡೀಲ್​ ಬಗ್ಗೆ ಯುಎಸ್​ಟಿಆರ್​ ಮಾಡಿರುವ ವರದಿ ವಾಸ್ತವಿಕವಾಗಿ ತಪ್ಪಾಗಿದೆ. ಹಾಗೂ 2019ರ ವರದಿಯಲ್ಲಿ ಮಾಡಿದ್ದ ಸುಳ್ಳುಗಳನ್ನ ಪುನರಾವರ್ತಿಸಿದೆ, ಇದನ್ನ ನಾವು ಬಲವಾಗಿ ಖಂಡಿಸುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ. ಯುಎಸ್​​ಟಿಆರ್​ ತನ್ನ ವರದಿಯಲ್ಲಿ ಸ್ನಾಪ್​ಡೀಲ್​ ಕಳೆದ ವರ್ಷದಿಂದ ಆನ್​ಲೈನ್ ಮಾರುಕಟ್ಟೆಯಲ್ಲಿ ನಕಲಿ ಉತ್ಪನ್ನಗಳ ಪ್ರಮಾಣ ಹೆಚ್ಚಾಗಿದೆ ಎಂದು ಆರೋಪಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...