alex Certify ಮಾಸ್ಕ್‌ ಮಹತ್ವ ತಿಳಿಸಲು ಟ್ವಿಟ್ಟರ್‌ ನಿಂದ ಈ ಐಡಿಯಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್‌ ಮಹತ್ವ ತಿಳಿಸಲು ಟ್ವಿಟ್ಟರ್‌ ನಿಂದ ಈ ಐಡಿಯಾ..!

Seen it Yet? Twitter Reminding Us to #WearAMask By Replacing Like Button With Masked Face

ನವದೆಹಲಿ: ಕೊರೊನಾ ವಿಶ್ವವನ್ನು ತಲ್ಲಣಗೊಳಿಸಿದೆ. ಆರ್ಥಿಕತೆಯನ್ನು ಬುಡಮೇಲು‌ ಮಾಡಿದೆ. ಎಲ್ಲದರ ನಡುವೆ ಭಾರತದ ಸಂಸತ್ ಅಧಿವೇಶನವನ್ನು ಪ್ರಾರಂಭಿಸಲಾಗಿದ್ದು, ಕೋವಿಡ್ ಪರೀಕ್ಷೆ ಮಾಡಿದಾಗ ಸಾಕಷ್ಟು ಸಂಸದರಿಗೂ ಕೊರೊನಾ‌ ಪಾಸಿಟಿವ್ ಬಂದಿದೆ. ಈ ನಡುವೆ ಸರ್ಕಾರ ದೇಶದಲ್ಲಿ ಸಂಪೂರ್ಣ ಅನ್ ಲಾಕ್ ಘೋಷಿಸಿದೆ. ಜನ ಸಾಮಾಜಿಕ ಅಂತರ, ಮಾಸ್ಕ್ ಮರೆತು ಓಡಾಡಲಾರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಲ್ಲಿ‌ ಮುಂಚೂಣಿಯಲ್ಲಿರುವ ಟ್ವಿಟರ್ ಈ ಸಂದರ್ಭದಲ್ಲಿ ಮಾಸ್ಕ್ ಧರಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಈಗ ಟ್ವಿಟರ್ ಪೋಸ್ಟ್ ಒಂದನ್ನು ಲೈಕ್ ಮಾಡಲು ಹಾರ್ಟ್ ಬಟನ್ ಒತ್ತಿದರೆ ಮಾಸ್ಕ್ ಧರಿಸಿದ ಇಮೋಜಿ ಬರಲಿದೆ.

ಈ ಕುರಿತು ಟ್ವೀಟರ್ ಟ್ವೀಟ್ ಮಾಡಿದ್ದು, “ಈ ವಿಷಯ ವೈರಲ್ ಆಗಬೇಕು ಎಂಬುದು ನಮ್ಮ ಇಚ್ಛೆ” ಎಂದು ಬರೆಯಲಾಗಿದೆ. ಕೆಲವೇ ಹೊತ್ತಿನಲ್ಲಿ ಟ್ವೀಟ್ ಟ್ರೆಂಡಿಂಗ್ ಆಗಿದೆ. ಟ್ವಿಟ್ಟರ್ ಸಾಮಾಜಿಕ ಕಾಳಜಿಯ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಈ ರೀತಿ ಸಾಮಾಜಿಕ ಕಾಳಜಿಯ ಕಾರ್ಯ ಮಾಡುತ್ತಿರುವುದು ಇದೇ ಮೊದಲಲ್ಲ. ತೃತೀಯ ಲಿಂಗಿಗಳ ಬೆಂಬಲಕ್ಕಾಗಿ ಜುಲೈನಲ್ಲಿ ಕಾಮನಬಿಲ್ಲನ್ನು ಪ್ರಕಟಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...