alex Certify SBI ಗ್ರಾಹಕರಿಗೆ ಬಂಪರ್‌ ಆಫರ್:‌ ಈ ವಹಿವಾಟುಗಳ ಮೇಲೆ ಸಿಗಲಿದೆ ಶೇ.50 ರಷ್ಟು ರಿಯಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರಿಗೆ ಬಂಪರ್‌ ಆಫರ್:‌ ಈ ವಹಿವಾಟುಗಳ ಮೇಲೆ ಸಿಗಲಿದೆ ಶೇ.50 ರಷ್ಟು ರಿಯಾಯಿತಿ

ದೇಶದ ಅತಿ ದೊಡ್ಡ ಗ್ರಾಹಕ ಬ್ಯಾಂಕ್ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ’ಯೋನೋ ಸೂಪರ್‌ ಸೇವಿಂಗ್ ಡೇಸ್’ ಹೆಸರಿನಲ್ಲಿ ಹೊಸ ಶಾಪಿಂಗ್ ಮೇಳಕ್ಕೆ ಚಾಲನೆ ಕೊಟ್ಟಿದೆ.

ಫೆಬ್ರವರಿ 4ರಿಂದ ಆರಂಭಗೊಳ್ಳಲಿರುವ ಈ ಸೇವಿಂಗ್ ಮೇಳವು ಫೆಬ್ರವರಿ 7ರ ವರೆಗೂ ಇರಲಿದೆ. ಈ ಅವಧಿಯಲ್ಲಿ ಎಸ್‌ಬಿಐನ ಸೇವೆಗಳ ಮುಖಾಂತರ ಮಾಡುವ ಖರೀದಿಗಳ ಮೇಲೆ ಆಕರ್ಷಕ ವಿನಾಯಿತಿಗಳು ಹಾಗೂ ಕ್ಯಾಶ್‌ಬ್ಯಾಕ್‌ಗಳು ಲಭ್ಯವಿರಲಿವೆ.

ಎಸ್‌ಬಿಐನ ಆನ್ಲೈನ್ ಸೇವಾದಾರ ಯೋನೋ ಇದೇ ವಿಚಾರವಾಗಿ ದೊಡ್ಡ ವರ್ತಕ ಸಂಸ್ಥೆಗಳಾದ ಅಮೆಜಾನ್, ಓಯೋ, ಪೆಪ್ಪರ್‌ಫ್ರೈ, ಸ್ಯಾಮ್ಸಂಗ್ ಹಾಗೂ ಯಾತ್ರಾ ಸೇರಿದಂತೆ ಅನೇಕ ಕಂಪನಿಗಳ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.

ಸೂಪರ್‌ ಸೇವಿಂಗ್ ದಿನಗಳ ಅವಧಿಯಲ್ಲಿ ಓಯೋ ರೂಂಗಳ ಮೇಲೆ 50% ವಿನಾಯಿತಿ, ಯಾತ್ರಾ.ಕಾಮ್‌ ಮೂಲಕ ಮಾಡುವ ಫ್ಲೈಟ್ ಟಿಕೆಟ್ ಬುಕಿಂಗ್ ಮೇಲೆ 10% ವಿನಾಯಿತಿ, ಸ್ಯಾಮ್ಸಂಗ್ ಮೊಬೈಲ್‌ಗಳ ಮೇಲೆ 15% ವಿನಾಯಿತಿ, ಸೇರಿದಂತೆ ಅನೇಕ ಎಕ್ಸ್‌ಕ್ಲೂಸಿವ್‌ ಲಾಭಗಳನ್ನು ಯೋನೋ ಕೊಡಮಾಡಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ 34.5 ದಶಲಕ್ಷ ನೋಂದಾಯಿತ ಗ್ರಾಹಕರು ಯೋನೋ ಸೇವೆಗಳನ್ನು ಬಳಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...