alex Certify ಲಾಕ್ ಡೌನ್ ಮಧ್ಯೆ SBI ನೀಡಿದೆ ಗ್ರಾಹಕರಿಗೆ ‘ಖುಷಿ ಸುದ್ದಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಮಧ್ಯೆ SBI ನೀಡಿದೆ ಗ್ರಾಹಕರಿಗೆ ‘ಖುಷಿ ಸುದ್ದಿ’

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಕ್ ಡೌನ್ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡಿದೆ. ಬ್ಯಾಂಕ್ ಬಡ್ಡಿ ದರಗಳನ್ನು ಶೇಕಡಾ 0.15 ರಷ್ಟು ಕಡಿತಗೊಳಿಸಿದೆ.

ಈ ಕಡಿತದ ನಂತರ ಬಡ್ಡಿ ದರಗಳು ಶೇಕಡಾ 7.40 ರಿಂದ 7.25 ಕ್ಕೆ ಇಳಿದಿವೆ. ಹೊಸ ದರಗಳು ಮೇ 10 ರಿಂದ ಅನ್ವಯವಾಗುತ್ತವೆ.  2020-21ರ ಬ್ಯಾಂಕ್ ಎರಡನೇ ಬಾರಿ ಈ ಕಡಿತ ಮಾಡ್ತಿದೆ.  ಈ ಮೊದಲು ಏಪ್ರಿಲ್‌ನಲ್ಲಿ ಎಸ್‌ಬಿಐ ಬಡ್ಡಿ ದರಗಳನ್ನು ಶೇಕಡಾ 0.35 ರಷ್ಟು ಕಡಿತಗೊಳಿಸಿತ್ತು.

ಎಸ್‌ಬಿಐನ ಈ ನಿರ್ಧಾರದ ನಂತರ 30 ವರ್ಷಗಳ ಕಾಲ ಎಂಸಿಎಲ್‌ಆರ್ ಆಧರಿಸಿ 25 ಲಕ್ಷ ರೂಪಾಯಿಗಳ ಗೃಹ ಸಾಲವನ್ನು ತೆಗೆದುಕೊಂಡಿದ್ದರೆ ಆ ಸಾಲಗಾರರಿಗೆ ಪ್ರತಿ ತಿಂಗಳು 255 ರೂಪಾಯಿ ಉಳಿಯಲಿದೆ. ಈ ನಿರ್ಧಾರದ ನಂತರ ಎಂಸಿಎಲ್‌ಆರ್ ಆಧಾರಿತ ಸಾಲದ ಮೇಲಿನ ಇಎಂಐ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...