alex Certify ಎಟಿಎಂ ಗ್ರಾಹಕರಿಗೆ SBI ನಿಂದ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಟಿಎಂ ಗ್ರಾಹಕರಿಗೆ SBI ನಿಂದ ಮಹತ್ವದ ಸೂಚನೆ

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಸಾರ್ವಜನಿಕರು ತಮ್ಮ ವ್ಯವಹಾರಗಳಿಗಾಗಿ ಆನ್ಲೈನ್ ವಹಿವಾಟು ನಡೆಸುತ್ತಿದ್ದರಲ್ಲದೆ ನಗದು ಹಿಂಪಡೆಯಲು ಎಟಿಎಂ ಬಳಕೆ ಮಾಡುತ್ತಿದ್ದರು.

ಈಗ ಲಾಕ್ಡೌನ್ ಸಡಿಲಗೊಂಡಿದ್ದರೂ ಸಹ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಹಣಕ್ಕಾಗಿ ಬ್ಯಾಂಕಿಗೆ ಹೋಗುವ ಬದಲು ಎಟಿಎಂಗಳನ್ನೇ ಹೆಚ್ಚಾಗಿ ಆಶ್ರಯಿಸುತ್ತಿದ್ದಾರೆ.

ಆನ್ಲೈನ್ ವಹಿವಾಟು ಹಾಗೂ ಎಟಿಎಂ ಬಳಕೆ ಹೆಚ್ಚಾಗುತ್ತಿದ್ದಂತೆ ಸೈಬರ್ ವಂಚನೆ ಪ್ರಕರಣಗಳು ಸಹ ಹೆಚ್ಚಳವಾಗಿದೆ. ಹೀಗಾಗಿ ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಬಳಕೆದಾರರ ಸುರಕ್ಷತೆಗಾಗಿ 10 ಟಿಪ್ಸ್ ಗಳನ್ನು ನೀಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಹತ್ತು ಪ್ರಮುಖ ಟಿಪ್ಸ್ ಗಳ ವಿವರ ಇಂತಿದೆ.

1. ಎಟಿಎಂ ಪಿನ್ ನಂಬರ್ ಅನ್ನು ಆಗಾಗ ಬದಲಾಯಿಸುತ್ತಿರಿ.

2. ಎಟಿಎಂನಲ್ಲಿ ಹಣದ ವಹಿವಾಟು ನಡೆಸುವ ವೇಳೆ ಪಿನ್ ನಂಬರ್ ನಮೂದಿಸುವಾಗ ಇತರೆಯವರಿಗೆ ಕಾಣಿಸದಂತೆ ಎಚ್ಚರಿಕೆ ವಹಿಸಿ.

3. ಎಟಿಎಂ ಕಾರ್ಡ್ ಮೇಲೆ ಎಂದಿಗೂ ಪಿನ್ ನಂಬರ್ ಬರೆಯಬೇಡಿ.

4. ಹುಟ್ಟುಹಬ್ಬ ಅಥವಾ ಇತರೆ ಸಮಾರಂಭಗಳ ದಿನಾಂಕವನ್ನು ಪಿನ್ ನಂಬರ್ ಆಗಿ ಬಳಸಬೇಡಿ.

5. ಎಟಿಎಂ ವಹಿವಾಟಿನ ಮಾಹಿತಿಯನ್ನು ಎಸ್ಎಂಎಸ್ ಮೂಲಕ ಪಡೆಯುವ ಸಲುವಾಗಿ ನಿಮ್ಮ ಮೊಬೈಲ್ ನಂಬರ್ ಅನ್ನು ತಪ್ಪದೆ ಬ್ಯಾಂಕಿನಲ್ಲಿ ನೋಂದಾಯಿಸಿ.

6. ಒಟಿಪಿ, ಎಟಿಎಂ ಕಾರ್ಡ್ ವಿವರ, ಪಿನ್ ನಂಬರ್ ಅನ್ನು ಇತರೆಯವರೊಂದಿಗೆ ಶೇರ್ ಮಾಡಬೇಡಿ.

7. ಎಸ್ಎಂಎಸ್, ಇ ಮೇಲ್ ಅಥವಾ ಕಾಲ್ ಮಾಡಿ ಎಟಿಎಂ ಕಾರ್ಡ್ ವಿವರ ಅಥವಾ ಪಿನ್ ನಂಬರ್ ಕೇಳಿದರೆ ಪ್ರತಿಕ್ರಿಯಿಸಬೇಡಿ.

8. ಎಟಿಎಂ ಒಳಗೆ ವಹಿವಾಟು ನಡೆಸುವಾಗ ಮತ್ತೊಬ್ಬರು ಪ್ರವೇಶಿಸದಂತೆ ನೋಡಿಕೊಳ್ಳಿ. ವಹಿವಾಟು ಮಾಡುವಾಗ ಒಬ್ಬರೇ ಇರುವುದು ಸೂಕ್ತ.

9. ಎಟಿಎಂ ನಲ್ಲಿ ಪಿನ್ ನಂಬರ್ ನಮೂದಿಸುವಾಗ ಹಿಂಬದಿಯಿಂದ ಯಾರಾದರೂ ಗಮನಿಸುತ್ತಿದ್ದಾರಾ ಎಂಬುದನ್ನು ತಿಳಿದುಕೊಳ್ಳಿ.

10 . ಎಟಿಎಂ ವಹಿವಾಟಿನ ಬಳಿಕ ಬರುವ ಸಂದೇಶವನ್ನು ತಪ್ಪದೆ ಗಮನಿಸಿ. ಅಲ್ಲದೇ ವಹಿವಾಟಿನ ಬಳಿಕ ಬರುವ ರಶೀದಿಯನ್ನು ತೆಗೆದುಕೊಳ್ಳಿ.

— State Bank of India (@TheOfficialSBI) August 10, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...