alex Certify ಗ್ರಾಹಕರಿಗೆ ಸ್ಯಾನಿಟೈಸರ್‌ ಹಾಕಲು ಬಂತು ಸೀರೆಯುಟ್ಟ ರೋಬೋಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಸ್ಯಾನಿಟೈಸರ್‌ ಹಾಕಲು ಬಂತು ಸೀರೆಯುಟ್ಟ ರೋಬೋಟ್

ಕೊರೊನಾ ವೈರಸ್‌ನಿಂದ ಸುರಕ್ಷಿತವಾಗಿ ಇರಲು ಜಾಗೃತಿ ಮೂಡಿಸುವ ಯತ್ನಗಳು ಎಲ್ಲೆಡೆ ನಡೆಯುತ್ತಿವೆ. ತಮಿಳುನಾಡಿನ ಸೀರೆ ಅಂಗಡಿಯೊಂದು ಇದೇ ವಿಚಾರವಾಗಿ ಆವಿಷ್ಕಾರೀ ಐಡಿಯಾದೊಂದಿಗೆ ಹೊರಬಂದಿದೆ.

ತನ್ನಲ್ಲಿಗೆ ಬರುವ ಗ್ರಾಹಕರ ಕೈಗಳಿಗೆ ಸ್ಯಾನಿಟೈಸರ್‌ ಹಾಕಲೆಂದು ಸೀರೆಯುಟ್ಟ ಪ್ರದರ್ಶನ ಗೊಂಬೆಗಳನ್ನು ಈ ಜವಳಿ ಅಂಗಡಿಯ ಆಡಳಿತ ಸಿಬ್ಬಂದಿ ನಿಲ್ಲಿಸಿದೆ.

ಈ ವಿಚಾರವನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡ IFS ಅಧಿಕಾರಿ ಸುಧಾ ರಾಮೆನ್, “ಸರಿಯಾದ ಉದ್ದೇಶಕ್ಕೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಸೀರೆಯುಟ್ಟ ಪ್ರದರ್ಶನ ಗೊಂಬೆ ಒಂದನ್ನು ಇಡಲಾಗಿದ್ದು, ಅದರ ಸುತ್ತ ಓಡಾಡುವ ಗ್ರಾಹಕರಿಗೆ ಸ್ಯಾನಿಟೈಸ್ ಮಾಡಲು ನೆರವಾಗುತ್ತಿದೆ. ಕೊರೊನಾ ನಂತರದ ದಿನಗಳಲ್ಲಿ ತಂತ್ರಜ್ಞಾನವನ್ನು ಇನ್ನಷ್ಟು ಆಳವಾಗಿ ಬಳಸುವುದನ್ನು ನೋಡಬಹುದು” ಎಂದು ತಿಳಿಸಿದ್ದಾರೆ.

— Sudha Ramen IFS ?? (@SudhaRamenIFS) July 20, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...