alex Certify ವಾಟ್ಸಾಪ್‌ ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತೆ ದೇಶಿ ʼಸಂದೇಶ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್‌ ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತೆ ದೇಶಿ ʼಸಂದೇಶ್ʼ

Image result for Sandes Is the Government's Own WhatsApp: How to Download It, and Everything You Need to Know

ವಾಟ್ಸಾಪ್‌ಗೆ ಪರ್ಯಾಯವಾಗಿ ಭಾರತದ ಸರ್ಕಾರದಿಂದ ತ್ವರಿತ ’ಸಂದೇಶ’ ಸೇವಾ ಕಿರು ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಬಿಡುಗಡೆ ಮಾಡಿದೆ. ಅದಾಗಲೇ ಚಾಲ್ತಿಯಲ್ಲಿರುವ ಸರ್ಕಾರೀ ತ್ವರಿತ ಸಂದೇಶ ರವಾನೆ ವ್ಯವಸ್ಥೆಗೆ (ಜಿಐಎಂಎಸ್‌) ಮಾಡಲಾದ ಮೇಲ್ದರ್ಜೆ ಇದಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ವಾಟ್ಸಾಪ್‌ ರೀತಿಯ ಸಂಪರ್ಕದ ಕಿರು ತಂತ್ರಾಂಶ ಇದಾಗಿದೆ.

ಸಂದೇಶ್‌ ಕಿರು ತಂತ್ರಾಂಶವನ್ನು ಸರ್ಕಾರಿ ಅಧಿಕಾರಿಗಳಲ್ಲದೇ ಸಾಮಾನ್ಯರೂ ಸಹ ತಂತಮ್ಮ ಸ್ಮಾರ್ಟ್‌ಫೋನ್‌ಗಳ ಮುಖಾಂತರ ಬಳಸಬಹುದಾಗಿದೆ. ಇದಕ್ಕಾಗಿ ಮೊಬೈಲ್‌ ಸಂಖ್ಯೆ ಅಥವಾ ಸರ್ಕಾರಿ ಇ-ಮೆಲ್‌ ಐಡಿಗಳನ್ನು ಬಳಸಿಕೊಂಡು ಸಂದೇಶ್‌ ಅಪ್ಲಿಕೇಶನ್‌ಗೆ ಸೈನ್‌-ಅಪ್ ಆಗಿ ಸಂದೇಶಗಳನ್ನು ಕಳುಹಿಸಬಹುದಾಗಿದೆ. ಚಿತ್ರಗಳು/ವಿಡಿಯೋಗಳಂಥ ಮಲ್ಟಿಮೀಡಿಯಾ ಕಂಟೆಂಟ್‌ಗಳನ್ನೂ ಸಹ ಸಂದೇಶದ ಮೂಲಕ ರವಾನೆ ಮಾಡಬಹುದಾಗಿದೆ.

ಅಮೆರಿಕಾ ಪೌರತ್ವದ ನಿರೀಕ್ಷೆಯಲ್ಲಿರುವ ಅನಿವಾಸಿ ಭಾರತೀಯರಿಗೆ ಗುಡ್​ ನ್ಯೂಸ್​​​

ಸಂದೇಶ್‌ನಲ್ಲೂ ಸಹ ಎಂಡ್‌-ಟು-ಎಂಟ್‌ ಟ್ರಾನ್ಸ್‌ಕ್ರಿಪ್ಷನ್‌ ಇದ್ದು, ಬಳಕೆದಾರರ ಖಾಸಗಿತನದ ಹಿತಾಸಕ್ತಿ ಕಾಪಾಡಲು ಕ್ರಮ ತೆಗೆದುಕೊಳ್ಳಲಾಗಿದೆ.

ಇಂಥದ್ದೇ ಮತ್ತೊಂದು ಕಿರು ತಂತ್ರಾಶ ’ಸಂವಾದ್‌’‌ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಿರು ತಂತ್ರಾಂಶವನ್ನೂ ಸಹ ಭಾರತ ಸರ್ಕಾರವೇ ಅಭಿವೃದ್ಧಿಪಡಿಸಲಿದ್ದು, ವಾಟ್ಸಾಪ್‌ನಂತೆಯೇ ಕೆಲಸ ಮಾಡಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನವೊಂದರ ವೇಳೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...