alex Certify ಸಾರಿಗೆ ಇಲಾಖೆಯಿಂದ ಗುಡ್ ನ್ಯೂಸ್: DL, LLR ಸೇರಿ ಹಲವು ಸೇವೆಗಳಿಗೆ ‘ಸಾರಥಿ -4’ ತಂತ್ರಾಂಶ ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರಿಗೆ ಇಲಾಖೆಯಿಂದ ಗುಡ್ ನ್ಯೂಸ್: DL, LLR ಸೇರಿ ಹಲವು ಸೇವೆಗಳಿಗೆ ‘ಸಾರಥಿ -4’ ತಂತ್ರಾಂಶ ಬಳಸಿ

ಕೊಪ್ಪಳ: ಬೆಂಗಳೂರು ಸಾರಿಗೆ ಇಲಾಖೆಯ ಆಯುಕ್ತರ ಕಚೇರಿಯ ಸುತ್ತೋಲೆಯಂತೆ ಸಾರಿಗೆ ಇಲಾಖೆಯ ಸಂಪರ್ಕರಹಿತ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಸಾರಥಿ-4 ತಂತ್ರಾಂಶವನ್ನು ಬಳಸುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಕಲಿಕಾ ಪರವಾನಿಗೆ ಎಲ್ಲಾ ಸೇವೆಗಳು, ಚಾಲನಾ ಅನುಜ್ಞಾ ಪತ್ರ ನವೀಕರಣ, ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ, ಚಾಲನಾ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ, ಚಾಲನಾ ಅನುಜ್ಞಾ ಪತ್ರದ ನಕಲಿ ಪ್ರತಿ  ಸೇವೆಗಳಿಗೆ ಸಾರಥಿ-4 ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕವೇ ಅರ್ಜಿ ನೋಂದಾಯಿಸಿ ಸಂಬಂಧಿಸಿದ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವ ಮೂಲಕ ಇಲಾಖೆಯ ಸೇವೆಗಳನ್ನು ಪಡೆಯಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ಆದ್ದರಿಂದ ಇಲಾಖೆಯ ಜಾಲತಾಣ www.parivahan.gov.in ನಲ್ಲಿ ಸಂಪರ್ಕರಹಿತವಾಗಿ ಸಾರಿಗೆ ಇಲಾಖೆ ಸೇವೆಗಳನ್ನು ಪಡೆಯಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...