alex Certify ಗಮನಿಸಿ…! RTGS ಸೇವೆಯಲ್ಲಿ ಭಾರೀ ವ್ಯತ್ಯಯ, ನಿಮ್ಮ ಹಣಕಾಸು ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! RTGS ಸೇವೆಯಲ್ಲಿ ಭಾರೀ ವ್ಯತ್ಯಯ, ನಿಮ್ಮ ಹಣಕಾಸು ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳಿ

ಆರ್​ಟಿಜಿಎಸ್​​ ತಾಂತ್ರಿಕ ಅಪ್​​ಗ್ರೇಡ್​​ ಕಾರಣದಿಂದ ಏಪ್ರಿಲ್​ 18 ರಂದು ಸೇವೆಯಲ್ಲಿ ವ್ಯತ್ಯಯವಾಗಲಿದೆ. ಕನಿಷ್ಟ 14 ಗಂಟೆಗಳ ಕಾಲ ಸೇವೆ ಲಭ್ಯವಿರಲ್ಲ. ಇದು ರಿಕವರಿ ಆಗಲು ಸಮಯ ಹಿಡಿಯುತ್ತದೆ. ಹೀಗಾಗಿ ಆರ್​ಟಿಜಿಎಸ್ ಸೌಕರ್ಯ ಕನಿಷ್ಟ 14 ಗಂಟೆಗಳ ಕಾಲ ಲಭ್ಯರಲ್ಲ ಎಂದು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಮಾಹಿತಿ ನೀಡಿದೆ.

ಬ್ಯಾಂಕ್​ ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯನ್ನ ನೀಡಬೇಕು. ಗ್ರಾಹಕರು ಭಾನುವಾರದ ಆರ್​ಟಿಜಿಎಸ್​ ಕಾರ್ಯಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆ.  RTGS ಸೇವೆಯಲ್ಲಿ ವ್ಯತ್ಯಯವಾದರೂ, ಎನ್​ಇಎಫ್​​ಟಿ ಸೇವೆ ಎಂದಿನಂತೆಯೇ ಲಭ್ಯವಿರಲಿದೆ ಎಂದು RBI ಹೇಳಿದೆ.

ಕಳೆದ ವಾರವಷ್ಟೇ ಆರ್​​​ಟಿಜಿಎಸ್​ ಹಾಗೂ ಎನ್​ಇಎಫ್​ಟಿ ಸೌಕರ್ಯವನ್ನ ನಾನ್​ ಬ್ಯಾಂಕಿಂಗ್​ ಪಾವತಿ ವ್ಯವಸ್ಥೆಗಳಿಗೂ ವಿಸ್ತರಣೆಮಾಡಲಾಗಿದೆ. ಇಲ್ಲಿಯವರೆಗೆ ಕೇವಲ ಬ್ಯಾಂಕ್​​ಗಳು ಮಾತ್ರ ಆರ್​​ಟಿಜಿಎಸ್​ ಹಾಗೂ ಎನ್​ಇಎಫ್​ಟಿ ಪಾವತಿ ವ್ಯವಸ್ಥೆಯನ್ನ ಹೊಂದಿದ್ದವು. ಆದರೆ ಆರ್​ಬಿಐನ ಹೇಳಿಕೆಯ ಬಳಿಕ ಈ ಸೌಕರ್ಯ ಕಾರ್ಡ್​ ನೆಟ್​ವರ್ಕ್​, ವೈಟ್​ ಲೇಬಲ್​, ಪ್ರೀಪೇಯ್ಡ್​ ಪೇಮೆಂಟ್​ ಸಾಧನ, ಟ್ರೇಡ್​ ರೀಸಿವೆಬಲ್ಸ್​ ಡಿಸ್​ಕೌಂಟಿಂಗ್​ ಸಿಸ್ಟೆಮ್​​ಗಳಿಗೂ ವ್ಯಾಪಿಸಿತ್ತು.

ಪಾವತಿ ವ್ಯವಸ್ಥೆಯಲ್ಲಿ ನಾನ್​​ ಬ್ಯಾಂಕ್​​ಗಳೂ ಭಾಗವಹಿಸಬೇಕು ಎಂಬ ಕಾರಣಕ್ಕೆ ಈ ಮಹತ್ವದ ಕ್ರಮವನ್ನ ಕೈಗೊಂಡಿತ್ತು. ಆರ್​ಬಿಐನ ಈ ಸಕಾರಾತ್ಮಕ ಬೆಳವಣಿಗೆಯಿಂದಾಗಿ ದೇಶದ ಆರ್ಥಿಕತೆಗೆ ಬಹುದೊಡ್ಡ ಲಾಭ ಸಿಗಲಿದೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...