alex Certify BIG NEWS: ವಾಹನ ಗುಜರಿ ನೀತಿಯಲ್ಲಿ ಮತ್ತೊಂದು ಹೆಜ್ಜೆ – ಏ.1 ರಿಂದ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ನೋಂದಣಿ ನವೀಕರಣ ಇಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಹನ ಗುಜರಿ ನೀತಿಯಲ್ಲಿ ಮತ್ತೊಂದು ಹೆಜ್ಜೆ – ಏ.1 ರಿಂದ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ನೋಂದಣಿ ನವೀಕರಣ ಇಲ್ಲ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಪ್ರಸ್ತಾವನೆಯನ್ನು ಅಂತಿಮಗೊಳಿಸಿದಲ್ಲಿ ಸರ್ಕಾರಿ ಇಲಾಖೆಗಳಿಗೆ ಸೇರಿದ 15 ವರ್ಷಕ್ಕಿಂತ ಹಳೆಯದಾದ ವಾಹನಗಳ ನೊಂದಣಿಯನ್ನು 2022 ರ ಏಪ್ರಿಲ್ 1 ರಿಂದ ನವೀಕರಿಸಲು ಸಾಧ್ಯವಾಗುವುದಿಲ್ಲ.

ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಸಂಬಂಧಿತ ನಿಯಮಗಳ ತಿದ್ದುಪಡಿಗಾಗಿ ಸಚಿವಾಲಯ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಪಿಎಸ್ ಯುಗಳು, ಪುರಸಭೆ ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಅನ್ವಯವಾಗುವಂತೆ ಎಲ್ಲ ಸರ್ಕಾರಿ ವಾಹನಗಳಿಗೆ 15 ವರ್ಷಕ್ಕಿಂತ ಹೆಚ್ಚು ಅವಧಿಯಾಗಿದ್ದಲ್ಲಿ 2022 ರ ಏಪ್ರಿಲ್ 1 ರಿಂದ ನೋಂದಣಿ ನವೀಕರಣ ಇರುವುದಿಲ್ಲ ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

2021 -22 ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ ಸ್ವಯಂಪ್ರೇರಿತ ವಾಹನ ಸ್ಕ್ರಾಪಿಂಗ್ ನೀತಿಯ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ನಂತರ ಫಿಟ್ನೆಸ್ ಪರೀಕ್ಷೆ, ವಾಣಿಜ್ಯ ವಾಹನಗಳಿಗೆ 15 ವರ್ಷ ಪೂರ್ಣಗೊಂಡ ನಂತರ ಫಿಟ್ನೆಸ್ ಪರೀಕ್ಷೆ ಅಗತ್ಯವಾಗಿರುತ್ತದೆ.

ಸರ್ಕಾರಿ ವಾಹನಗಳಿಗೆ 15 ವರ್ಷ ಮೇಲ್ಪಟ್ಟಿದ್ದರೆ ನೋಂದಣಿ ಪ್ರಮಾಣ ಪತ್ರವನ್ನು ನವೀಕರಿಸಲಾಗುವುದಿಲ್ಲ. ಇಂತಹ ಹಳೆಯ ವಾಹನಗಳು ಇತ್ತೀಚಿನ ವಾಹನಗಳಿಗಿಂತ 10 -12 ಪಟ್ಟು ಹೆಚ್ಚು ಮಾಲಿನ್ಯವನ್ನು ಉಂಟು ಮಾಡುತ್ತವೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ಒಂದು ಕೋಟಿಯಷ್ಟು ವಾಹನಗಳು ಗುಜರಿಗೆ ಹೋಗಲಿವೆ. ಈ ಕ್ರಮದಿಂದ ಸುಮಾರು 10 ಸಾವಿರ ಕೋಟಿ ರೂಪಾಯಿ ಹೊಸ ಹೂಡಿಕೆಗೆ ಕಾರಣವಾಗಲಿದೆ. ಅಲ್ಲದೇ, 50,000 ಉದ್ಯೋಗ ಸೃಷ್ಠಿಯಾಗಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...