alex Certify ಕಾರು ಖರೀದಿದಾರರಿಗೆ ರೆನಾಲ್ಟ್‌ ನಿಂದ ಬಂಪರ್‌ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಖರೀದಿದಾರರಿಗೆ ರೆನಾಲ್ಟ್‌ ನಿಂದ ಬಂಪರ್‌ ಆಫರ್

ಈ ವರ್ಷದ ಮೊದಲ ತಿಂಗಳಲ್ಲಿ ರೆನಾಲ್ಡ್​ ಕಂಪನಿ ತನ್ನ ಉನ್ನತ ಶ್ರೇಣಿಯ ಟ್ರೈಬರ್​, ಡಸ್ಟರ್​ ಹಾಗೂ ಕ್ವಿಡ್​ ಕಾರುಗಳಲ್ಲಿ ಆಕರ್ಷಕ ರಿಯಾಯಿತಿ ಘೋಷಣೆ ಮಾಡಿದೆ. 2021ರ ವರ್ಷವನ್ನ ಉತ್ತಮ ಸಂಖ್ಯೆಯೊಂದಿಗೆ ಆರಂಭಿಸುವ ಉದ್ದೇಶದಿಂದ ಈ ಫ್ರೆಂಚ್​ ವಾಹನ ತಯಾರಕ ಸಂಸ್ಥೆ ಬಿಎಸ್​ 6 ಕಂಪ್ಲೈಂಟ್​ನಲ್ಲಿ 65000 ರೂಪಾಯಿಗಳವರೆಗೆ ರಿಯಾಯಿತಿ ನೀಡುತ್ತಿದೆ.‌

ಹೊಸ ಕಾರನ್ನ ಖರೀದಿ ಮಾಡುವ ಪ್ಲಾನ್​ನಲ್ಲಿರುವವರು ಜನವರಿ 31ರೊಳಗಾಗಿ ಈ ಸೌಲಭ್ಯವನ್ನ ಪಡೆಯಬಹುದಾಗಿದೆ. ಆದರೆ ರೆನಾಲ್ಟ್​​ ನೀಡಿರುವ ಈ ಕೊಡುಗೆ ದೇಶದ ವಿವಿಧ ಡೀಲರ್​ಗಳಲ್ಲಿ ಒಂದೊಂದು ರೀತಿಯಲ್ಲಿ ಸಿಗಲಿದೆ.

ರೆನಾಲ್ಟ್​ನ ಪ್ರಾಥಮಿಕ ಮಟ್ಟದ ಕಾರು ಕ್ವಿಡ್​ ಅಧಿಕೃತ ವೆಬ್​ಸೈಟ್​ನಲ್ಲಿ 50000 ರೂಪಾಯಿ ಲಾಭದಲ್ಲಿ ಸಿಗಲಿದೆ. ಇದು ₹ 20,000 ನಗದು ರಿಯಾಯಿತಿ ಮತ್ತು ಆಯ್ದ ಎಎಂಟಿ ರೂಪಾಂತರಗಳಿಗೆ ಮಾತ್ರ ₹ 20,000 ವಿನಿಮಯ ಲಾಭವನ್ನು ಒಳಗೊಂಡಿದೆ. ರೆನಾಲ್ಟ್ ಮಾದರಿಯೊಂದಿಗೆ ವಿನಿಮಯ ಲಾಭ ಅಥವಾ ಹೆಚ್ಚುವರಿ ರೆನಾಲ್ಟ್ ಮಾದರಿಯನ್ನು ಖರೀದಿಸಿದರೆ ನಗದು ರಿಯಾಯಿತಿಯನ್ನು ಒಳಗೊಂಡಿರುತ್ತದೆ. ಬಿಎಸ್ 6 ಕಂಪ್ಲೈಂಟ್ ರೆನಾಲ್ಟ್ ಕ್ವಿಡ್ನಲ್ಲಿ ವಿಶೇಷ ಬಡ್ಡಿದರ ಶೇಕಡಾ 5.99 ರಷ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...