alex Certify ಏರ್ಟೆಲ್, ವೋಡಾಫೋನ್ ಗಿಂತ ಅಗ್ಗದ ಪ್ಲಾನ್ ಬಿಡುಗಡೆ ಮಾಡಿದ ಜಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ಟೆಲ್, ವೋಡಾಫೋನ್ ಗಿಂತ ಅಗ್ಗದ ಪ್ಲಾನ್ ಬಿಡುಗಡೆ ಮಾಡಿದ ಜಿಯೋ

ಹೆಚ್ಚಿನ ಡೇಟಾ ಮತ್ತು ಹೆಚ್ಚಿನ ಕರೆಗಳೊಂದಿಗೆ ರಿಲಯನ್ಸ್ ಜಿಯೋ ಹೊಸ ವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದೆ. ರಿಲಯನ್ಸ್ ಜಿಯೋ ಹೊಸ ಯೋಜನೆ ವರ್ಕ್ ಫ್ರಂ ಹೋಮ್ ನಲ್ಲಿ ಜನರಿಗೆ ಸಹಾಯವಾಗಲಿದೆ. ಜಿಯೋದ ಈ ಯೋಜನೆಯ ಬೆಲೆ  2,399 ರೂಪಾಯಿ.

ಈ ಯೋಜನೆಯಲ್ಲಿ ಸಾಕಷ್ಟು ಸೌಲಭ್ಯಗಳು ಲಭ್ಯವಿದೆ. 2,399 ರೂಪಾಯಿ ಈ ಯೋಜನೆಯಲ್ಲಿ ರಿಲಯನ್ಸ್ ಜಿಯೋ ಬಳಕೆದಾರರಿಗೆ ದಿನಕ್ಕೆ 2 ಜಿಬಿ ಡೇಟಾ ಸಿಗಲಿದೆ.  ಅನಿಯಮಿತ ಕರೆಗಳು ಮತ್ತು ಸಂದೇಶ ಕಳುಹಿಸುವ ಸೌಲಭ್ಯವನ್ನೂ ನೀಡಲಾಗುವುದು. ಈ ಯೋಜನೆಯ ಸಿಂಧುತ್ವವು 365 ದಿನಗಳು.

ಏರ್‌ಟೆಲ್ ಮತ್ತು ವೋಡಾಫೋನ್ ಯೋಜನೆಗಳಿಗಿಂತ ಜಿಯೋ ಯೋಜನೆ ಅಗ್ಗವಾಗಿದೆ. ಏರ್ಟೆಲ್ ನ 2,398 ರೂಪಾಯಿಗಳ ವಾರ್ಷಿಕ ಯೋಜನೆ 365 ದಿನಗಳ ಮಾನ್ಯತೆ ಹೊಂದಿದ್ದು, 1.5 ಜಿಬಿ ಡೇಟಾ ಪ್ರತಿದಿನ ಗ್ರಾಹಕರಿಗೆ ಸಿಗ್ತಿದೆ. ವೋಡಾಫೋನ್ 2,399 ರೂಪಾಯಿ ಯೋಜನೆಯು ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆಗಳು ಮತ್ತು ಸಂದೇಶ ಸೌಲಭ್ಯ ನೀಡ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...