alex Certify ಇದೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ‘ಇತಿಹಾಸ’ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ‘ಇತಿಹಾಸ’ ದಾಖಲೆ

ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಏಪ್ರಿಲ್ ನಲ್ಲಿ ದೇಶಾದ್ಯಂತ ಒಂದೇ ಒಂದು ವಾಹನ ಮಾರಾಟವಾಗಿಲ್ಲ. ಈ ವರ್ಷದ ಏಪ್ರಿಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶೂನ್ಯ ವಾಹನ ಮಾರಾಟದ ತಿಂಗಳು ಎಂದು ಹೇಳಲಾಗಿದೆ.

ದೇಶಾದ್ಯಂತ ಲಾಕ್ಡೌನ್ ಜಾರಿಯಾಗಿದ್ದರಿಂದ ವಾಹನ ತಯಾರಿಕಾ ಘಟಕಗಳು, ವಾಹನ ಮಾರಾಟ ಕೇಂದ್ರಗಳು ಮುಚ್ಚಿವೆ. ಇದರಿಂದಾಗಿ ಏಪ್ರಿಲ್ ನಲ್ಲಿ ಒಂದೇ ಒಂದು ಕಾರು, ಬೈಕ್, ಲಾರಿ, ಬಸ್ ಸೇರಿ ಯಾವುದೇ ವಾಹನ ಮಾರಾಟವಾಗಿಲ್ಲ ಎನ್ನಲಾಗಿದ್ದು, ಮೇ 1 ರಂದು ವಾಹನ ಉದ್ದಿಮೆಗಳಿಂದ ಏಪ್ರಿಲ್ ನಲ್ಲಿ ಮಾರಾಟವಾದ ಅಧಿಕೃತ ಅಂಕಿ ಅಂಶಗಳ ಮಾಹಿತಿ ನೀಡಲಾಗುತ್ತದೆ.

ಆದರೆ, ಲಾಕ್ಡೌನ್ ಇರುವುದರಿಂದ ಯಾವುದೇ ವಾಹನ ಮಾರಾಟವಾಗಿಲ್ಲ ಶೂನ್ಯ ವಾಹನ ಮಾರಾಟದ ಏಪ್ರಿಲ್ ತಿಂಗಳು ಇತಿಹಾಸದಲ್ಲಿಯೇ ಮೊದಲು ಎಂದು ದಾಖಲಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...