alex Certify ಮಹಿಳೆಯರಿಗೆ ಭರ್ಜರಿ ಗುಡ್‌ ನ್ಯೂಸ್: ಹಣ ಗಳಿಸಲು ಬಯಸುವವರಿಗೆ PNB ನೀಡ್ತಿದೆ ತರಬೇತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಭರ್ಜರಿ ಗುಡ್‌ ನ್ಯೂಸ್: ಹಣ ಗಳಿಸಲು ಬಯಸುವವರಿಗೆ PNB ನೀಡ್ತಿದೆ ತರಬೇತಿ

ಮಹಿಳೆಯರನ್ನು ಸಬಲೀಕರಣಗೊಳಿಸಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಪಿಎನ್‌ಬಿ ಮಹಿಳೆಯರ ಸಹಾಯಕ್ಕಾಗಿ ಮತ್ತೊಮ್ಮೆ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರದಿಂದಲೂ ನೆರವು ಸಿಗ್ತಿದೆ. ಈ ಕಾರ್ಯಕ್ರಮಕ್ಕೆ ಹೆಸರನ್ನು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.

ಮಹಿಳೆಯರಿಗೆ ನೀಡುವ ವಿಶೇಷ ತರಬೇತಿ ಬಗ್ಗೆ ಟ್ವೀಟ್ ಮಾಡುವ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ. ಆನ್ಲೈನ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಏಪ್ರಿಲ್ 15.

ಪಿಎನ್‌ಬಿಯ ಈ ತರಬೇತಿ ಕಾರ್ಯಕ್ರಮವನ್ನು ರಾಷ್ಟ್ರೀಯ ಮಹಿಳಾ ಆಯೋಗದ  ಸಹಯೋಗದೊಂದಿಗೆ ನಡೆಸಲಾಗುವುದು. ಉದ್ಯಮಶೀಲತೆಯ ಮೂಲಕ ಮಹಿಳೆಯರ ಸಬಲೀಕರಣ ಎಂದು ಇದಕ್ಕೆ ಬ್ಯಾಂಕ್ ಹೆಸರಿಟ್ಟಿದೆ. ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ https://innovateindia.mygov.in/ncw-challenge/  ಗೆ ಭೇಟಿ ನೀಡಬಹುದು.

ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ 6 ವಾರಗಳ ಕಾಲ ತರಬೇತಿ ನೀಡಲಾಗುವುದು. ಯಾವುದೇ ಸ್ಥಳದಿಂದಲೂ ಮಹಿಳೆಯರು ಇದರಲ್ಲಿ ಭಾಗವಹಿಸಬಹುದು. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ‘ಡು ಯುವರ್ ವೆಂಚರ್’ ಸಿದ್ಧಾಂತದ ಮೂಲಕ ಉದ್ಯಮ ಪ್ರಾರಂಭಿಸುವ ಬಗ್ಗೆ ದಾರಿ ತೋರಲಾಗುವುದು.

ಈ ಕೋರ್ಸ್‌ಗಾಗಿ ಪ್ರತಿದಿನ 3 ರಿಂದ 4 ಗಂಟೆಗಳ ಸಮಯವನ್ನು ನೀಡಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಬೇಕು. ಕಾರ್ಯಕ್ರಮಕ್ಕಾಗಿ ವಿಡಿಯೊವನ್ನು ಕಳುಹಿಸಬೇಕು. ಅದು ಕನಿಷ್ಠ 5 ನಿಮಿಷ ಇರಬೇಕು. ವಿಡಿಯೊವನ್ನು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ರೆಕಾರ್ಡ್ ಮಾಡಬೇಕು.  ಈ ಕಾರ್ಯಕ್ರಮದಡಿ ಉದ್ಯಮಿಗಳಾಗುವ ಕನಸು ಕಾಣುತ್ತಿರುವ 5000 ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಮಹಿಳೆಯರಿಗೆ ಐಐಎಂ ಪ್ರಾಧ್ಯಾಪಕರು ತರಬೇತಿ ನೀಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...