alex Certify ಮದ್ಯದಂಗಡಿ ಓಪನ್ ಖುಷಿಯಲ್ಲಿದ್ದ ಎಣ್ಣೆ ಪ್ರಿಯರಿಗೆ ʼಶಾಕಿಂಗ್ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿ ಓಪನ್ ಖುಷಿಯಲ್ಲಿದ್ದ ಎಣ್ಣೆ ಪ್ರಿಯರಿಗೆ ʼಶಾಕಿಂಗ್ ನ್ಯೂಸ್ʼ

ರಾಜ್ಯಾದ್ಯಂತ ಇಂದಿನಿಂದ ಮದ್ಯ ಮಾರಾಟ ಆರಂಭವಾಗಲಿದೆ. 42 ದಿನಗಳ ಬಳಿಕ ಮದ್ಯದಂಗಡಿ ಓಪನ್ ಆಗುತ್ತಿದ್ದು, ಭಾರೀ ಗಮನ ಸೆಳೆದಿದೆ. ಅಲ್ಲದೇ ಹಬ್ಬದ ಖುಷಿಯ ವಾತಾವರಣ ಕಂಡುಬಂದಿದೆ.

ಇಂದು ಬೆಳಗ್ಗೆಯಿಂದ ಮದ್ಯ ಸಿಗುತ್ತೆ ಬೇಕಾದಷ್ಟು ಕುಡಿಯಬಹುದು ಎಂದುಕೊಂಡವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕೇಳಿದಷ್ಟು ಮದ್ಯ ಸಿಗುವುದಿಲ್ಲ. ಮದ್ಯ ಖರೀದಿಗೆ ಮಿತಿ ಹೇರಲಾಗಿದೆ. ಅಲ್ಲದೆ, ಮದ್ಯ ದುಬಾರಿಯಾಗಿರುವುದರಿಂದ ಹಿಂದಿಗಿಂತ ಹೆಚ್ಚಿನ ಬೆಲೆ ನೀಡಿ ಮದ್ಯ ಖರೀದಿಸಬೇಕಿದೆ.

ಕಳೆದ ಮಾರ್ಚ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್ ನಲ್ಲಿ ವಿವಿಧ ಮದ್ಯಗಳ ಮೇಲಿನ ತೆರಿಗೆಯನ್ನು ಶೇಕಡ 6 ರಷ್ಟು ಹೆಚ್ಚಳ ಮಾಡಿದ್ದಾರೆ. ಏಪ್ರಿಲ್ 1 ರಿಂದ ಹೊಸ ದರ ಜಾರಿಯಲ್ಲಿದ್ದು ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇಕಡ 6ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ವಿವಿಧ ಬ್ರಾಂಡ್ ಮದ್ಯದ ಬೆಲೆ 180 ಎಂಎಲ್ ದರ ಕನಿಷ್ಠ 3 ರೂಪಾಯಿಯಿಂದ 30 ರೂಪಾಯಿಯವರೆಗೆ ಹೆಚ್ಚಳವಾಗಿದ್ದು, ದುಬಾರಿ ದರ ತೆತ್ತು ಮದ್ಯ ಸೇವಿಸಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...