alex Certify ಮೋದಿ ಹೂಡಿಕೆ ಮಾಡಿರುವ ಅಂಚೆ ಕಚೇರಿಯ ಈ ಯೋಜನೆಯಲ್ಲಿ ಸಿಗುತ್ತೆ ʼಬಂಪರ್ʼ ರಿಟರ್ನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಹೂಡಿಕೆ ಮಾಡಿರುವ ಅಂಚೆ ಕಚೇರಿಯ ಈ ಯೋಜನೆಯಲ್ಲಿ ಸಿಗುತ್ತೆ ʼಬಂಪರ್ʼ ರಿಟರ್ನ್

ಕೊರೊನಾ ಕಾಲದಲ್ಲಿ ಉಳಿತಾಯದ ಮಹತ್ವ ಜನರಿಗೆ ಗೊತ್ತಾಗಿದೆ. ಉಳಿತಾಯ ಸಣ್ಣದಿರಲಿ ದೊಡ್ಡದಿರಲಿ ಕಷ್ಟದ ಸಂದರ್ಭದಲ್ಲಿ ಇದು ನೆರವಿಗೆ ಬಂದಿದೆ. ಒಂದಲ್ಲ ಒಂದು ರೂಪದಲ್ಲಿ ಉಳಿತಾಯ ಮಾಡುವಂತೆ ಜನರಿಗೆ ತಜ್ಞರು ಸಲಹೆ ನೀಡುತ್ತಾರೆ. ಹಣವನ್ನು ಸರಿಯಾದ ಸ್ಥಳದಲ್ಲಿ ಉಳಿತಾಯ ಮಾಡುವುದು ಬಹಳ ಮುಖ್ಯ. ಉಳಿತಾಯದ ವಿಷ್ಯ ಬಂದಾಗ ಅಂಚೆ ಕಚೇರಿ ಯೋಜನೆಗಳು ಗಮನ ಸೆಳೆಯುತ್ತವೆ.

ಅಂಚೆ ಕಚೇರಿ ಉಳಿತಾಯ ಯೋಜನೆಯಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ ಸಾಕಷ್ಟು ಪ್ರಯೋಜನಕಾರಿ. ಉಳಿತಾಯವು ದೊಡ್ಡದಾಗಲಿ ಅಥವಾ ಸಣ್ಣದಾಗಲಿ, ಈ ಯೋಜನೆಯಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಕೆಲವೇ ವರ್ಷಗಳಲ್ಲಿ ದೊಡ್ಡ ಆದಾಯ ಹಿಂಪಡೆಯಬಹುದು. ಹಣ  ಅಂಚೆ ಕಚೇರಿಯಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುವುದರಿಂದ ಉಳಿತಾಯವನ್ನು ಯಾವುದೇ ಅಪಾಯವಿಲ್ಲದೆ ಮಾಡಬಹುದು. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಮುಕ್ತಾಯದ ಅವಧಿ 5 ವರ್ಷ.

GOOD NEWS: ಪಿಪಿಎಫ್ ಸೇರಿ ಈ ಮೂರು ಹೂಡಿಕೆಯಲ್ಲಿ ಸಿಗುತ್ತೆ ತೆರಿಗೆ ವಿನಾಯಿತಿ

ಕೆಲವು ಷರತ್ತುಗಳೊಂದಿಗೆ 1 ವರ್ಷದ ಮುಕ್ತಾಯ ಅವಧಿಯ ನಂತರವೂ ಯೋಜನೆ ಮೊತ್ತವನ್ನು  ಹಿಂಪಡೆಯಬಹುದು. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಬಡ್ಡಿ ದರವನ್ನು ಸರ್ಕಾರವು ಹಣಕಾಸಿನ ವರ್ಷದ ಪ್ರತಿ ತ್ರೈಮಾಸಿಕದ ಆರಂಭದಲ್ಲಿ ನಿರ್ಧರಿಸುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಕೇವಲ 100 ರೂಪಾಯಿಗಳ ಹೂಡಿಕೆ ಮಾಡಬಹುದು. ಈ ಯೋಜನೆಗೆ ವಾರ್ಷಿಕವಾಗಿ ಶೇಕಡಾ 6.8 ರಷ್ಟು ಬಡ್ಡಿ ಸಿಗುತ್ತಿದೆ. ಈ ಯೋಜನೆಯಡಿ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂಪಾಯಿಗಳ ತೆರಿಗೆ ರಿಯಾಯಿತಿ ಪಡೆಯಬಹುದು.

1.8 ಲಕ್ಷ ರೂ. ಹೂಡಿಕೆಯಲ್ಲಿ ಶುರುಮಾಡಿ ಲಾಭಕರ ಬ್ಯುಸಿನೆಸ್

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಅಂಚೆ ಕಚೇರಿಯಲ್ಲಿ 100, 500, 1000, 5000 ಮತ್ತು 10,000 ರೂಪಾಯಿಗಳಿಗೆ ಲಭ್ಯವಿದೆ. ವಿಭಿನ್ನ ಮೌಲ್ಯದ ಯಾವುದೇ ಪ್ರಮಾಣಪತ್ರಗಳನ್ನು ಖರೀದಿಸಬಹುದು. ಆರಂಭದಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 6.8 ರಷ್ಟು ಬಡ್ಡಿದರ ಸಿಗುತ್ತದೆ. ಅಂದರೆ 5 ವರ್ಷಗಳ ನಂತರ ನಿಮಗೆ 20.85 ಲಕ್ಷ ರೂಪಾಯಿಗಳು, ಅಂದರೆ ಸುಮಾರು 21 ಲಕ್ಷ ರೂಪಾಯಿ ಸಿಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಇದ್ರಲ್ಲಿ ಹೂಡಿಕೆ ಮಾಡಿದ್ದಾರೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಪಿಎಂ ಮೋದಿ 8,43,124 ರೂಪಾಯಿ ಹೂಡಿಕೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...