alex Certify BIG NEWS: ಪೆಟ್ರೋಲ್ ಲೀಟರ್ ಗೆ 75 ರೂ.ಗೆ ಇಳಿಸಲು ಇಲ್ಲಿದೆ ಸುಲಭ ದಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪೆಟ್ರೋಲ್ ಲೀಟರ್ ಗೆ 75 ರೂ.ಗೆ ಇಳಿಸಲು ಇಲ್ಲಿದೆ ಸುಲಭ ದಾರಿ

ದೇಶದಲ್ಲಿ ಸದ್ಯ ಪೆಟ್ರೋಲ್​ ಬೆಲೆ ಏರಿಕೆಯದ್ದೇ ಚರ್ಚೆ. ಈ ಸಂಬಂಧ ವಿಪಕ್ಷಗಳು ಕೇಂದ್ರ ಸರ್ಕಾರವನ್ನ ದೂಷಿಸುತ್ತಿವೆ. ಆದರೆ ಪೆಟ್ರೋಲ್​ ದರವನ್ನ ಜಿಎಸ್​ಟಿ ವ್ಯಾಪ್ತಿಗೆ ತಂದಲ್ಲಿ ಪೆಟ್ರೋಲ್​ ದರ 75 ರೂಪಾಯಿಗೆ ಬರಬಹುದು. ಆದರೆ ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಈ ಇಚ್ಛಾಶಕ್ತಿಯ ಕೊರತೆಯೇ ದೇಶದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆಗೆ ಕಾರಣ ಎಂದು ಎಸ್​ಬಿಐ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡೀಸೆಲ್​ ದರ ಪ್ರತಿ ಲೀಟರ್​ಗೆ 68 ರೂಪಾಯಿಗಿಂತ ಕಡಿಮೆ ಹಾಗೂ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ 75 ರೂಪಾಯಿ ಕಡಿಮೆಗೆ ತಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ 1 ಲಕ್ಷ ಕೋಟಿ ರೂಪಾಯಿ ಅಥವಾ 0.4 ಪ್ರತಿಶತ ಜಿಡಿಪಿ ನಷ್ಟ ಹೊಂದಿರಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 60 ಡಾಲರ್​ ಹಾಗೂ ವಿನಿಮಯದ ದರ 73 ರೂಪಾಯಿ ಅಂದಾಜಿನಲ್ಲಿ ಇಟ್ಟುಕೊಂಡು ಈ ಲೆಕ್ಕಾಚಾರ ಮಾಡಲಾಗಿದೆ.
ಪ್ರಸ್ತುತ ದೇಶದ ಪ್ರತಿಯೊಂದು ರಾಜ್ಯಗಳು ವಿಭಿನ್ನ ಇಂಧನ ಬೆಲೆಯನ್ನ ಗ್ರಾಹಕರಿಗೆ ವಿಧಿಸುತ್ತಿವೆ. ಕೇಂದ್ರ ಸರ್ಕಾರ ಪೆಟ್ರೋಲ್​ ಮೇಲೆ ಸುಂಕ ಹಾಗೂ ಸೆಸ್​ನ್ನು ಸಂಗ್ರಹಿಸುತ್ತದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರಸ್ತುತ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ ನೂರರ ಗಡಿ ದಾಟಿಬಿಟ್ಟಿದೆ.
ತೈಲೋತ್ಪನ್ನಗಳನ್ನ ಮಾರಾಟದಿಂದ ಸಿಗುವ ತೆರಿಗೆ / ವ್ಯಾಟ್​ ಪ್ರಮುಖ ಆದಾಯದ ಮೂಲ ಆಗಿರೋದ್ರಿಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಎಸ್​ಟಿ ಅಡಿಯಲ್ಲಿ ಕಚ್ಚಾತೈಲಗಳನ್ನ ತರಲು ಒಪ್ಪೋದಿಲ್ಲ. ಈ ಇಚ್ಛಾಶಕ್ತಿ ಕೊರತೆಯೇ ತೈಲೋತ್ಪನ್ನಗಳ ಬೆಲೆ ಏರಿಕೆಗೆ ಕಾರಣ ಎಂದು ಎಸ್​ಬಿಐ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...