alex Certify ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ಮುಂಬೈನಲ್ಲೂ ಶತಕ ಬಾರಿಸಿದ ಡೀಸೆಲ್ ದರ, ದಾಖಲೆಯ ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ಮುಂಬೈನಲ್ಲೂ ಶತಕ ಬಾರಿಸಿದ ಡೀಸೆಲ್ ದರ, ದಾಖಲೆಯ ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್ ಬೆಲೆ

ನವದೆಹಲಿ: ಇಂದು ಸತತ ಐದನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾದ ನಂತರ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇಂದು ಪೆಟ್ರೋಲ್, ಡೀಸೆಲ್ ಬೆಲೆ: ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 30 -35 ಪೈಸೆಯಷ್ಟು ಏರಿಕೆ ಮಾಡಲಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಡೀಸೆಲ್ ದರ 100 ರೂ. ಗಡಿ ದಾಳಿ

ಅಕ್ಟೋಬರ್ 9 ರಂದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ ಐದನೇ ದಿನ ಮತ್ತೆ ಏರಿಕೆಯಾಗಿದ್ದು, ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ, ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್ ದರವನ್ನು 35 ಪೈಸೆ ಏರಿಕೆ ಮಾಡಲಾಗಿದೆ. ಅನೇಕ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ 100 ರೂ.ಗಳನ್ನು ದಾಟಿದೆ.

ಬೆಲೆ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 103.84 ರೂ. ಮತ್ತು ಡೀಸೆಲ್ 92.47 ರೂ.ಗೆ ಲಭ್ಯವಿದೆ.

ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 29 ಪೈಸೆ ಹೆಚ್ಚಾಗಿ, 109.83 ರೂ.ಆಗಿದೆ. ಡೀಸೆಲ್ ಬೆಲೆ ಮುಂಬೈನಲ್ಲಿ ಒಂದು ಲೀಟರ್‌ಗೆ 37 ಪೈಸೆ ಹೆಚ್ಚಳವಾಗಿ 100.29 ರೂ.ಗೆ ತಲುಪಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ(ಒಎಂಸಿ) ಇತ್ತೀಚಿನ ದರ ಪರಿಷ್ಕರಣೆಯ ನಂತರ ದೇಶಾದ್ಯಂತ ಶನಿವಾರ ಇಂಧನ ದರಗಳು ದಾಖಲೆಯ ಏರಿಕೆಯಾಗಿದೆ.

ಸತತ ಐದನೇ ದಿನವೂ ಇಂಧನ ದರ ಏರಿಕೆ

ಕಳೆದ ನಾಲ್ಕು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬಂದಿದ್ದು, ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರುತ್ತಿವೆ.

ಸೆಪ್ಟೆಂಬರ್ 24 ರಿಂದ ಡೀಸೆಲ್ ದರ 3.80 ರೂ. ಹೆಚ್ಚಳವಾಗಿದೆ. ಸೆಪ್ಟೆಂಬರ್ 28 ರಿಂದ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 2.70 ರೂ.. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪೆಟ್ರೋಲ್ ಬೆಲೆ ಈಗ 112.38 ರೂ. ಮತ್ತು ಡೀಸೆಲ್ ಬೆಲೆ 101.54 ರೂ. ಇದೆ.

ಮೇ 4 ಮತ್ತು ಜುಲೈ 17 ರ ನಡುವೆ, ಪೆಟ್ರೋಲ್ ದರ ಲೀಟರ್‌ಗೆ 11.44 ರೂ. ಮತ್ತು ಡೀಸೆಲ್ ದರ 9.14 ರೂ.ಹೆಚ್ಚಳವಾಗಿದೆ.

ಇಂಧನ ದರಗಳು ರಾಜ್ಯದಿಂದ ರಾಜ್ಯಕ್ಕೆ ಮತ್ತು ನಗರಗಳಲ್ಲಿ ಕೂಡ ಬದಲಾಗುತ್ತವೆ. ಇದು ಸ್ಥಳೀಯ ತೆರಿಗೆಗಳು, ಮೌಲ್ಯವರ್ಧಿತ ತೆರಿಗೆ(ವ್ಯಾಟ್) ಮತ್ತು ಸರಕು ಶುಲ್ಕಗಳ ಮೇಲೆ ಅವಲಂಬಿತವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...